ಕರ್ನಾಟಕ

karnataka

ETV Bharat / state

ನಾಳೆ ಆಲಮಟ್ಟಿಯ ಕೃಷ್ಣಾನದಿಗೆ ಬಾಗಿನ ಅರ್ಪಿಸಲಿರುವ ಸಿಎಂ : ಯುಕೆಪಿ ಯೋಜನೆಯ ಆಶಾಭಾವನೆ - ನಾಳೆ ಕೃಷ್ಣಾನದಿಗೆ ಬಾಗಿನ ಅರ್ಪಿಸಲಿರುವ ಸಿಎಂ

ಮುಖ್ಯಮಂತ್ರಿಯಾಗಿರುವ ಬಸವರಾಜ್ ಬೊಮ್ಮಾಯಿ ಅವರು ಸಹ ನೀರಾವರಿ ವಿಚಾರದಲ್ಲಿ ಸಂಪೂರ್ಣ ಮಾಹಿತಿ ಉಳ್ಳವರಾಗಿದ್ದಾರೆ. ಅದರಲ್ಲೂ ಕೃಷ್ಣಾ ಮೇಲ್ದಂಡೆ ಯೋಜನೆ, ಕಳಸಾ ಬಂಡೂರಿ ಯೋಜನೆ ಸೇರಿದಂತೆ ಉತ್ತರ ಕರ್ನಾಟಕದ ಯೋಜನೆಗಳ ಬಗ್ಗೆ ತೀವ್ರ ಆಸಕ್ತಿಯುಳ್ಳವರಾಗಿದ್ದಾರೆ. ಬಾಗಲಕೋಟೆ ಜಿಲ್ಲೆಗೆ ಇದೀಗ ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಆಗಬೇಕಾದ ಕೆಲಸಗಳು ಈಗ ಕೈಗೂಡಲಿವೆ ಅನ್ನೋ ವಿಶ್ವಾಸ ಜನರಲ್ಲಿ ಮೂಡಿದೆ..

Alamatti Krishna River
ಆಲಮಟ್ಟಿಯ ಕೃಷ್ಣಾನದಿ

By

Published : Aug 20, 2021, 7:30 PM IST

ಬಾಗಲಕೋಟೆ :ಸಿಎಂ ಬಸವರಾಜ್ ಬೊಮ್ಮಯಿಯವರು ನಾಳೆ ಆಲಮಟ್ಟಿಯ ಕೃಷ್ಣಾ ನದಿಗೆ ಬಾಗಿನ ಅರ್ಪಿಸಲಿದ್ದಾರೆ. ಈ ಹಿನ್ನೆಲೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ನೀರಾವರಿ ಸೇರಿದಂತೆ ಪ್ರಮುಖ ಸಮಸ್ಯೆಗಳನ್ನು ಬಗೆಹರಿಯಲಿವೆ ಎಂಬ ಆಶಾಭಾವನೆ ಹೊಂದಿದ್ದಾರೆ.

ನಾಳೆ ಆಲಮಟ್ಟಿಯ ಕೃಷ್ಣಾನದಿಗೆ ಬಾಗಿನ ಅರ್ಪಿಸಲಿರುವ ಸಿಎಂ

ಉತ್ತರ ಕರ್ನಾಟಕದ ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಸಾಕಷ್ಟು ಅನುದಾನದ ಅಗತ್ಯ ಇದ್ದು, ಇನ್ನೂ ಸಹ ಸಮಸ್ಯೆಗಳಿಂದ ಮುಕ್ತಿ ಹೊಂದಿಲ್ಲ. ಪ್ರತಿಸಲ ಮುಳುಗಡೆ ವ್ಯಾಪ್ತಿಯ ಗ್ರಾಮಗಳ ಸಂತ್ರಸ್ತರ ಗೋಳು ಮಾತ್ರ ನಿಂತಿಲ್ಲ.

ರಾಜಕೀಯ ಕೇಂದ್ರವಾದ ಜಿಲ್ಲೆ :ಈಗಾಗಲೇ ವಿರೋಧ ಪಕ್ಷದ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಎಸ್.ಆರ್.ಪಾಟೀಲ ಇಬ್ಬರೂ ಬಾಗಲಕೋಟೆ ಜಿಲ್ಲೆಯ ಜನಪ್ರತಿನಿಧಿಗಳೆ ಆಗಿದ್ದು, ಇವುಗಳ ನಡುವೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರದ ಸಂಪುಟದಲ್ಲಿ ಜಲ ಸಂಪನ್ಮೂಲ ಸಚಿವ ಸ್ಥಾನವನ್ನು ಹಿರಿಯ ಶಾಸಕ ಗೋವಿಂದ ಕಾರಜೋಳ ಅವರಿಗೆ ನೀಡಲಾಗಿದೆ. ಇದರಿಂದ ಜಿಲ್ಲೆಯ ಸಂತ್ರಸ್ತರ ಸಮಸ್ಯೆ ಬಗೆ ಹರಿಯುವ ವಿಶ್ವಾಸ ಇಮ್ಮಡಿಗೊಳಿಸಿದೆ.

ಸಚಿವ ಗೋವಿಂದ ಕಾರಜೋಳರಿಗೆ ಸಂತ್ರಸ್ತರ ಸಮಸ್ಯೆ, ಮುಳುಗಡೆ, ಪರಿಹಾರ, ಪುನರ್ವಸತಿ ಹೀಗೆ ಹತ್ತಾರೂ ವಿಚಾರಗಳು ಸಂಪೂರ್ಣ ಕರಗತವಾಗಿರೋ ಹಿನ್ನೆಲೆ ಜಲಸಂಪನ್ಮೂಲ ಖಾತೆಯನ್ನು ಸಮರ್ಪಕವಾಗಿ ನಿರ್ವಹಿಸಿ ಅದರಲ್ಲೂ ಮುಖ್ಯವಾಗಿ ಕೃಷ್ಣಾ ಮೇಲ್ದಂಡೆ ಯೋಜನೆಯ ವ್ಯಾಪ್ತಿಯಲ್ಲಿರೋ ಹಳ್ಳಿಗಳ ಸ್ಥಳಾಂತರ, ಪರಿಹಾರ, ಪುನರ್ವಸತಿ ಮತ್ತು ಪುನರ್ನಿರ್ಮಾಣಕ್ಕೆ ಹೆಚ್ಚಿನ ಒತ್ತು ಕೊಟ್ಟು ಕಾರ್ಯ ನಿರ್ವಹಿಸುವ ವಿಶ್ವಾಸವಿದೆ.

ಮುಖ್ಯಮಂತ್ರಿಯಾಗಿರುವ ಬಸವರಾಜ್ ಬೊಮ್ಮಾಯಿ ಅವರು ಸಹ ನೀರಾವರಿ ವಿಚಾರದಲ್ಲಿ ಸಂಪೂರ್ಣ ಮಾಹಿತಿ ಉಳ್ಳವರಾಗಿದ್ದಾರೆ. ಅದರಲ್ಲೂ ಕೃಷ್ಣಾ ಮೇಲ್ದಂಡೆ ಯೋಜನೆ, ಕಳಸಾ ಬಂಡೂರಿ ಯೋಜನೆ ಸೇರಿದಂತೆ ಉತ್ತರ ಕರ್ನಾಟಕದ ಯೋಜನೆಗಳ ಬಗ್ಗೆ ತೀವ್ರ ಆಸಕ್ತಿಯುಳ್ಳವರಾಗಿದ್ದಾರೆ. ಬಾಗಲಕೋಟೆ ಜಿಲ್ಲೆಗೆ ಇದೀಗ ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಆಗಬೇಕಾದ ಕೆಲಸಗಳು ಈಗ ಕೈಗೂಡಲಿವೆ ಅನ್ನೋ ವಿಶ್ವಾಸ ಜನರಲ್ಲಿ ಮೂಡಿದೆ.

ಪ್ರಮುಖವಾಗಿ 3ನೇ ಹಂತದ ಹಿನ್ನೀರಿನಲ್ಲಿ ಮುಳಗಡೆಯಾಗುವ ಭೂ ಸ್ವಾಧೀನ ಪಡಿಸಿಕೊಂಡು ಪರಿಹಾರ ನೀಡಬೇಕು. ಭೂಮಿ ಕಳೆದುಕೊಳ್ಳುವ ಸಂತ್ರಸ್ತರಿಗೆ ಪರಿಹಾರ ನೀಡಿದ ನಂತರ ಪುನಃ ಬದುಕು ಕಟ್ಟಿಕೊಳ್ಳಲು ಕಾಲಾವಕಾಶ ನೀಡಬೇಕು. ಇದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಬಜೆಟ್ ಮಾಡಿ ಹಣ ಒದಗಿಸಬೇಕು. ತಮ್ಮ ಕುಟುಂಬಗಳಿಗೆ ಶಿಕ್ಷಣ ಭಾಗ್ಯ ಒದಗಿಸಬೇಕು ಎಂದು ಸಂತ್ರಸ್ತರು ಆಗ್ರಹಿಸಿದ್ದಾರೆ.

ABOUT THE AUTHOR

...view details