ಬಾಗಲಕೋಟೆ :ಜಿಲ್ಲೆಯಲ್ಲಿ 69 ಜನ ಕೋವಿಡ್ನಿಂದ ಗುಣಮುಖರಾಗಿ ನಿಗದಿತ ಆಸ್ಪತ್ರೆ ಮತ್ತು ಸಿಸಿಸಿ ಕೇಂದ್ರಗಳಿಂದ ಬಿಡುಗಡೆಯಾಗಿದ್ದು, ಹೊಸದಾಗಿ 254 ಕೊರೊನಾ ಪ್ರಕರಣಗಳು ಗುರುವಾರ ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 10491 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ ಒಟ್ಟು 9354 ಜನ ಕೋವಿಡ್ನಿಂದ ಗುಣಮುಖರಾಗಿದ್ದಾರೆ. ಹೊಸದಾಗಿ ಬಾಗಲಕೋಟೆ ತಾಲೂಕಿನಲ್ಲಿ 84, ಬಾದಾಮಿ 24, ಬೀಳಗಿ 46, ಜಮಖಂಡಿ 50, ಮುಧೋಳ 50 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಅವರಿಗೆ ನಿಗದಿತ ಆಸ್ಪತ್ರೆ ಮತ್ತು ಸಿಸಿಸಿ ಕೇಂದ್ರಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲಾ ಕೋವಿಡ್ ಲ್ಯಾಬ್ನಲ್ಲಿ ಪರೀಕ್ಷಿಸಲಾಗುತ್ತಿದ್ದ 1560 ಸ್ಯಾಂಪಲ್ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 1,07,336 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 94,774 ನೆಗೆಟಿವ್ ಪ್ರಕರಣ, 10491 ಪಾಸಿಟಿವ್ ಪ್ರಕರಣ ಹಾಗೂ 107 ಮೃತ ಪ್ರಕರಣ ದಾಖಲಾಗಿವೆ. ಇನ್ನು 1030 ಮಾತ್ರ ಸಕ್ರಿಯ ಪ್ರಕರಣಗಳು ಇವೆ. ಇಲ್ಲಿವರೆಗೆ ಒಟ್ಟು 413 ಸ್ಯಾಂಪಲ್ಗಳು ಮಾತ್ರ ರಿಜೆಕ್ಟ್ ಆಗಿರುತ್ತವೆ. ಕಂಟೇನ್ಮೆಂಟ್ ಝೋನ್ 438 ಇರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಗೆ ಆಟೋಮೆಟಿಕ್ ಮಷಿನ್:
ಜಿಲ್ಲೆಯಲ್ಲಿ ಗಂಟಲು ಮಾದರಿ ಸ್ಯಾಂಪಲ್ಗಳ ಪರೀಕ್ಷೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಬಂದಂತಹ ಅಟೋಮೆಟಿಕ್ ಆರ್ಎನ್ಎ ಎಕ್ಸ್ಯಾಟ್ರಿಕ್ ಯಂತ್ರವನ್ನು ಶಾಸಕ ವೀರಣ್ಣ ಚರಂತಿಮಠ ಜಿಲ್ಲಾ ಆಸ್ಪತ್ರೆಗೆ ಗುರುವಾರ ನೀಡಿದರು.