ಬಾಗಲಕೋಟೆ : ಜಿಲ್ಲೆಯಲ್ಲಿ ಇಂದು ಮೂರು ಜನ ಮಹಿಳೆಯರು ಸೇರಿದಂತೆ ಒಟ್ಟು 6 ಜನ ಕೋವಿಡ್-19ನಿಂದ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 117 ಇದ್ದು, ಈವರೆಗೆ ಗುಣಮುಖರಾದವರ ಸಂಖ್ಯೆ 100ಕ್ಕೆ ಏರಿಕೆ ಆಗಿದೆ. ಇನ್ನು 17 ಜನರಿಗೆ ಚಿಕಿತ್ಸೆ ಮುಂದುವರೆದಿದ್ದು, ಇವರು ಸಹ ಶೀಘ್ರವಾಗಿ ಗುಣಮುಖರಾಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮುಧೋಳದ 55 ವರ್ಷದ ಪುರುಷ ಪಿ-6519, ಗುಳೇದಗುಡ್ಡದ 28 ವರ್ಷದ ಯುವತಿ ಪಿ-6830, 55 ವರ್ಷದ ಮಹಿಳೆ ಪಿ-6829, ರಬಕವಿ-ಬನಹಟ್ಟಿಯ 25 ವರ್ಷದ ಯುವಕ ಪಿ-6831, ಬಾದಾಮಿಯ ಎಂ.ಎಲ್.ಬಿ.ಸಿ ಕಾಲೋನಿಯ 30 ವರ್ಷದ ಮಹಿಳೆ ಪಿ-6042, ಬೀಳಗಿ ತಾಲೂಕಿನ ಸಿದ್ದಾಪೂರ ಎಲ್.ಟಿ ಗ್ರಾಮದ 27 ವರ್ಷದ ಯುವತಿ ಪಿ-5760 ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಇನ್ನು ಗುಣಮುಖರಾದವರಿಗೆ ಜಿಲ್ಲಾ ವೈದ್ಯಾಧಿಕಾರಿ ಡಾ.ಪ್ರಕಾಶ್ ಬಿರಾದಾರ ಪ್ರಮಾಣ ಪತ್ರ ವಿತರಣೆ ಮಾಡಿದರು. ಆಸ್ಪತ್ರೆ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಗುಣಮುಖರಾದ ರೋಗಿಗಳನ್ನು ಕಳುಹಿಸಿಕೊಟ್ಟರು.