ಬಾಗಲಕೋಟೆ:ಅಮಲು ಬರುವ ತಂಬಾಕಿನಿಂದ ತಯಾರಿಸುವ ಮಾವ ಎಂಬ ಪದಾರ್ಥವನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ, ಅವರಿಂದ ಅಡಕೆ, ಸುಣ್ಣ ಹಾಗೂ ತಂಬಾಕು ಪದಾರ್ಥಗಳನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹೊಸುರು ಗ್ರಾಮದಲ್ಲಿ ನಡೆದಿದೆ.
ಬಾಗಲಕೋಟೆ: 'ಮಾವ' ಮಾರುತ್ತಿದ್ದ ಇಬ್ಬರ ಬಂಧನ
ತಂಬಾಕಿನಿಂದ ತಯಾರಿಸುವ ಮಾವ ಎಂಬ ಪದಾರ್ಥವನ್ನು ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ.
ಅಜರುದ್ದಿನ್ ಗೌಸಮೋದಿನ ಇನಾಂದಾರ (20) ಹಾಗೂ ಫಿರೋಜ್ ದಾದಾಪೀರ ಕುಳ್ಳೋಳ್ಳಿ (38) ಬಂಧಿತರು. ಆರೋಪಿಗಳಿಂದ ಮಾವ ಪ್ಯಾಕೇಟ್, 500 ರೂ. ಮೌಲ್ಯದ 12 ಕೆಜಿ ಒಣ ಮಾವ, 13,500 ರೂ. ಮೌಲ್ಯದ 55 ಕೆಜಿ ತಂಬಾಕು, 8000 ಮೌಲ್ಯದ 50 ಕೆಜಿ ಕಚ್ಚಾ ಅಡಕೆ, 190 ರೂ. ಮೌಲ್ಯದ 19 ಕೆಜಿ ಸುಣ್ಣ ಹಾಗೂ 30,000 ರೂ. ಮೌಲ್ಯದ 2 ಅಡಕೆ ಒಡೆಯುವ ಯಂತ್ರ ಸೇರಿ ಒಟ್ಟು 52,580 ಮೌಲ್ಯದ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸ್ಪಿ ಲೋಕೇಶ ಜಗಲಸಾರ ತಿಳಿಸಿದ್ದಾರೆ.
ಡಿಸಿಆರ್ಬಿ ಹಾಗೂ ಕ್ರೈಂ ಬ್ರಾಂಚ್ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ರಬಕವಿ-ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿದೆ.