ಬಾಗಲಕೋಟೆ:ಒಂದೇ ಕುಟುಂಬದ ಮೂವರು ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬಾದಾಮಿ ತಾಲೂಕಿನ ಶಿವಯೋಗಿ ಮಂದಿರ ಬಳಿಯ ಮಲಪ್ರಭಾ ನದಿಯಲ್ಲಿ ನಡೆದಿದೆ.
ಮಲಪ್ರಭಾ ನದಿಯಲ್ಲಿ ಕಾಲು ಜಾರಿ ಬಿದ್ದು ಒಂದೇ ಕುಟುಂಬದ ಮೂವರು ಸಾವು ವಿಶ್ವನಾಥ ಮಾವಿನಮರದ (30), ಪತ್ನಿ ಶ್ರೀದೇವಿ, ಮಗಳು ನಂದಿನಿ ಮೃತಪಟ್ಟವರು. ಹುಣ್ಣಿಮೆ ಹಾಗೂ ರಕ್ಷಾ ಬಂಧನ ಹಿನ್ನೆಲೆಯಲ್ಲಿ ಕುಟುಂಬ ಶಿವಯೋಗಿ ಮಂದಿರಕ್ಕೆ ಆಗಮಿಸಿತ್ತು.
ಈ ಸಮಯದಲ್ಲಿ ನೀರಿಗೆ ಇಳಿದಾಗ ಕಾಲು ಜಾರಿ ಬಿದ್ದು, ಒಬ್ಬರನ್ನು ಮತ್ತೊಬ್ಬರು ಕಾಪಾಡಲು ಹೋಗಿ ಮೂವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರು ಗದಗ ಮೂಲದವರಾಗಿದ್ದಾರೆ ಎಂದು ತಿಳಿದು ಬಂದಿದೆ.
ಪತ್ನಿ ಶ್ರೀದೇವಿ ಮೃತದೇಹ ಪತ್ತೆಯಾಗಿದ್ದು, ಪತಿ ವಿಶ್ವನಾಥ, ಮಗಳು ನಂದಿನಿ ಶವಕ್ಕಾಗಿ ಅಗ್ನಿಶಾಮಕ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಸಂಬಂಧ ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಹೆಣ್ಣು ನೋಡಲು ಹೊರಟ ಬೈಕ್ಗೆ ಕ್ಯಾಂಟರ್ ಡಿಕ್ಕಿ : ದಂಪತಿ ಸ್ಥಳದಲ್ಲೇ ಸಾವು