ಕರ್ನಾಟಕ

karnataka

ETV Bharat / state

ಕೊರೊನಾದಿಂದ ಪೊಲೀಸ್ ಸಿಬ್ಬಂದಿ ಸೇರಿ ಮೂವರ ಸಾವು - corona a latest news

ಪೊಲೀಸ್ ಸಿಬ್ಬಂದಿ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಿದ್ದಾರೆ. ಆದರೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದ ಹಿನ್ನೆಲೆ ಸಾವಿಗೀಡಾಗಿದ್ದಾರೆ.

Three Dies from corona In Bagalakot
ಕೊರೊನಾದಿಂದ ಪೊಲೀಸ್ ಸಿಬ್ಬಂದಿ ಸೇರಿ ಮೂವರ ಸಾವು

By

Published : Jul 29, 2020, 3:45 AM IST

ಬಾಗಲಕೋಟೆ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪೊಲೀಸ್ ಸಿಬ್ಬಂದಿ ಓರ್ವರು ಸೇರಿದಂತೆ ಮೂವರು ಕೋವಿಡ್​ನಿಂದ ಮೃತ ಪಟ್ಟಿರುವುದು ವರದಿಯಾಗಿದೆ.

ಪೊಲೀಸ್ ಸಿಬ್ಬಂದಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದ ಹಿನ್ನೆಲೆ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಜಿಲ್ಲೆಯಲ್ಲಿ ಹೊಸದಾಗಿ ಮತ್ತೆ 115 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ.ಇದರಿಂದ‌ ಸೋಂಕಿತರ ಸಂಖ್ಯೆ 1408 ಕ್ಕೆ ಏರಿಕೆ ಯಾಗಿದೆ.

ಇಲ್ಲಿಯವರೆಗೆ ಗುಣಮುಖರಾದ ಒಟ್ಟು 828 ಸೋಂಕಿತರು ಡಿಸಾರ್ಜ್​ ಆಗಿದ್ದಾರೆ. ಇನ್ನು 540 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಸದಾಗಿ ಸೋಂಕು ದೃಡಪಟ್ಟವರ ಪೈಕಿ ಬಾಗಲಕೋಟೆ ತಾಲೂಕಿನಲ್ಲಿ 39, ಬೀಳಗಿ 15, ಹುನಗುಂದ 10, ಮುಧೋಳ 4, ಜಮಖಂಡಿ 31, ಬದಾಮಿ 13, ಬೇರೆ ಜಿಲ್ಲೆಯ 3 ಪ್ರಕರಣಗಳು ಪತ್ತೆಯಾಗಿವೆ.

ABOUT THE AUTHOR

...view details