ಬಾಗಲಕೋಟೆ:ಜಿಲ್ಲೆಯ ಜಮಖಂಡಿ ಪಟ್ಟಣದ ಅರಮನೆ ಬಳಿಯಿರುವ ರಾಮೇಶ್ವರ ದೇವಾಲಯದ ಹೊಂಡದಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿವೆ.
ಜಮಖಂಡಿ ದೇಗುಲದ ಹೊಂಡಕ್ಕೆ ಸೇರಿದ ಕೊಳಚೆ ನೀರು... ಸಾವಿರಾರು ಮೀನುಗಳು ಸಾವು
ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದ ಅರಮನೆ ಬಳಿಯಿರುವ ರಾಮೇಶ್ವರ ದೇವಾಲಯದ ಹೊಂಡದಲ್ಲಿ ಆಮ್ಲಜನಕನದ ಕೊರತೆಯುಂಟಾಗಿ ಸಾವಿರಾರು ಮೀನುಗಳು ಸಾವನ್ನಪ್ಪಿವೆ.
ಕಳೆದ ದಿನ ಅಮವಾಸ್ಯೆಯಿದ್ದ ಹಿನ್ನೆಲೆ, ಭಕ್ತರು ಪೂಜೆಗೆ ಆಗಮಿಸಿದ್ದ ವೇಳೆ ಹೋಳಿಗೆ,ಬೆಲ್ಲ ಸೇರಿದಂತೆ ಇತರ ಪದಾರ್ಥಗಳನ್ನ ಪೂಜೆ ಮಾಡಿ ಹೊಂಡದಲ್ಲಿ ಎಸೆದಿದ್ದರು. ಇದರಿಂದ ಮೀನುಗಳು ಮೃತಪಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಅಲ್ಲದೆ,ಹೊಂಡಕ್ಕೆ ಕೊಳಚೆ ನೀರು ಸೇರಿತ್ತು. ಇದರಿಂದ ಆಮ್ಲಜನಕನದ ಕೊರತೆಯುಂಟಾಗಿ ಮೀನುಗಳು ಮೃತಪಟ್ಟಿವೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹೊಂಡ ಸ್ವಚ್ಚತೆಗಾಗಿ ಈ ಹಿಂದೆ ಮೀನುಗಳನ್ನ ಬಿಡಲಾಗಿದ್ದು, ಬಳಿಕ ಅವುಗಳ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ,ಇದು ಐತಿಹಾಸಿಕ ದೇವಸ್ಥಾನವಾಗಿರುವುದರಿಂದ ಮೀನು ಹಿಡಿಯಲು ಅವಕಾಶವಿರಲಿಲ್ಲ. ಇದು ಕೂಡ ಮೀನುಗಳು ಮೃತಪಡಲು ಕಾರಣವಾಗಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.