ಕರ್ನಾಟಕ

karnataka

ETV Bharat / state

ತೋಟದ ಮನೆಯಲ್ಲಿರುವ ಬೈಕ್​​​ಗಳ ಚಕ್ರಗಳನ್ನು ಕದ್ದೊಯ್ಯುತ್ತಿರುವ ಖದೀಮರು - ಬೈಕ್ ಚಕ್ರ​ ಕಳ್ಳತನ

ಕೆಲ ದಿನಗಳ ಹಿಂದಷ್ಟೇ ತೊದಲಬಾಗಿಯಲ್ಲಿಯೂ ಕೂಡ ಇಂತಹದ್ದೇ ಘಟನೆ ಬೆಳಕಿಗೆ ಬಂದಿತ್ತು. ತೊದಲಬಾಗಿ ಚಿಕ್ಕಲಕಿ ಕ್ರಾಸ್ ಜನವಾಡ ಕವಟಗಿ (ಹೊಸ ಊರು) ಮತ್ತು ಗದ್ಯಾಳ ಗ್ರಾಮದ ಭಾಗಗಳಲ್ಲಿ ಇಂತಹ ಎರಡ್ಮೂರು ಘಟನೆಗಳು ಬೆಳಕಿಗೆ ಬಂದಿವೆ..

thieves are stolen bike wheels !
ತೋಟದ ಮನೆಯಲ್ಲಿ ನಿಂತ ಬೈಕ್​​​ಗಳೇ ಇವರ ಟಾರ್ಗೆಟ್​​​....ಚಕ್ರಗಳನ್ನು ಕದ್ದೊಯ್ಯುತ್ತಿರುವ ಖದೀಮರು

By

Published : Dec 30, 2020, 7:10 AM IST

ಬಾಗಲಕೋಟೆ: ಇತ್ತೀಚಿನ ದಿನಗಳಲ್ಲಿ ಬೈಕ್​ ಕಳ್ಳತನ ಪ್ರಕರಣಗಳು ಹೆಚ್ಚಾಗ್ತಿವೆ. ಆದ್ರೆ, ಇಲ್ಲಿ ಖದೀಮರು ನಿಂತ ಬೈಕ್​​ನ ಚಕ್ರಗಳನ್ನು ಕದ್ದೊಯ್ಯುತ್ತಿದ್ದಾರೆ.

ಬೈಕ್​ ಚಕ್ರಗಳ ಕಳ್ಳತನ

ಇಂತಹ ಕಳ್ಳತನ ಪ್ರಕರಣಗಳು ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದ ತೋಟದ ಮನೆಯಲ್ಲಿ ನಡೆಯುತ್ತಿವೆ. ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಗಳ ದ್ವಿಚಕ್ರವನ್ನು ಕಳ್ಳತನ ಮಾಡುತ್ತಿದ್ದಾರೆ.

ಜಮಖಂಡಿ ತಾಲೂಕಿನ ಜನವಾಡ ಹತ್ತಿರ ತೋಟದ ಮನೆಯಲ್ಲಿ ವಾಸಿಸುತ್ತಿರುವ ತೊದಲಬಾಗಿ ಜಿಲ್ಲಾ ಪಂಚಾಯತ್ ಸದಸ್ಯರ ಪತಿಯ ಬೈಕ್​​ನ ಎರಡು ಚಕ್ರಗಳನ್ನು ಸೋಮವಾರ ರಾತ್ರಿ ವೇಳೆ ಖದೀಮರು ಕಳ್ಳತನ ಮಾಡಿದ್ದಾರೆ.

ಇನ್ನು ಸುಖದೇವ ಶರ್ಮಾ ಎಂಬುವರ ಬೈಕ್‌ನ ಖದೀಮರು ರಾತ್ರಿ ವೇಳೆ ಸದ್ದಿಲ್ಲದೇ ಹೊತ್ತುಕೊಂಡು ಸ್ವಲ್ಪ ದೂರ ಹೋಗಿ ದ್ರಾಕ್ಷಿ ಹೊಲದಲ್ಲಿ ನಿಲ್ಲಿಸಿ ಅದರ ಎರಡು ಚಕ್ರಗಳನ್ನು ಕಳ್ಳತನ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:ಎಸ್ಎಸ್ಎಲ್​​ಸಿ ಪರೀಕ್ಷೆಯಲ್ಲಿ ಫೇಲ್.. ತಾಯಿ ಸೀರೆಯಲ್ಲಿ ನೇಣು ಬಿಗಿದುಕೊಂಡು ಬಾಲಕ ಆತ್ಮಹತ್ಯೆ

ಕೆಲ ದಿನಗಳ ಹಿಂದಷ್ಟೇ ತೊದಲಬಾಗಿಯಲ್ಲಿಯೂ ಕೂಡ ಇಂತಹದ್ದೇ ಘಟನೆ ಬೆಳಕಿಗೆ ಬಂದಿತ್ತು. ತೊದಲಬಾಗಿ ಚಿಕ್ಕಲಕಿ ಕ್ರಾಸ್ ಜನವಾಡ ಕವಟಗಿ (ಹೊಸ ಊರು) ಮತ್ತು ಗದ್ಯಾಳ ಗ್ರಾಮದ ಭಾಗಗಳಲ್ಲಿ ಇಂತಹ ಎರಡ್ಮೂರು ಘಟನೆಗಳು ಬೆಳಕಿಗೆ ಬಂದಿವೆ.

ಹೀಗೆ ಹೆಚ್ಚು ಕಳ್ಳತನ ಆಗುತ್ತಿರುವುದರಿಂದ ತೋಟದ ಮನೆಗಳಲ್ಲಿ ವಾಸಿಸುವ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಇನ್ನಾದ್ರೂ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಇತ್ತ ಗಮನ ಹರಿಸಿ ಕಳ್ಳರನ್ನು ಹಿಡಿದು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ABOUT THE AUTHOR

...view details