ಬಾಗಲಕೋಟೆ :ಜಮಖಂಡಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ವೇಳೆ ವ್ಯಕ್ತಿಯೊಬ್ಬನಲ್ಲಿ ಕಂಡು ಬಂದ ಹೈಟೆಂಪರೇಚರ್ನಿಂದಾಗಿ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.
ಟೆಂಪರೇಚರ್ ಹೆಚ್ಚಿರುವ ವ್ಯಕ್ತಿ ಕೈಯಲ್ಲಿ ಕ್ವಾರಂಟೈನ್ ಸೀಲ್ ಇದ್ದು, ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದ ನಿವಾಸಿ ಎಂದು ತಿಳಿದಿದೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ವ್ಯಕ್ತಿಯ ದೇಹಕ್ಕೆ ಹೈಪೊಕ್ಲೊರೈಡ್ನಿಂದ ಸ್ಯಾನಿಟೈಸ್ ಮಾಡಿದ್ದಾರೆ.
ಬಸ್ ನಿಲ್ದಾಣದಲ್ಲಿದ್ದ ವ್ಯಕ್ತಿಗೆ ಕೊರೊನಾ ಸೋಂಕಿರುವ ಶಂಕೆ ಕಳೆದ ಕೆಲ ದಿನಗಳಿಂದ ಜಮಖಂಡಿ ನಗರದಲ್ಲಿ ಈ ವ್ಯಕ್ತಿ ಓಡಾಟ ನಡೆಸಿರುವುದಾಗಿ ತಿಳಿದಿದೆ. ಶಂಕಿತನನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ಸಿಬ್ಬಂದಿ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದಾರೆ.
ಯಾವ ಊರು ಎಂದು ಸರಿಯಾಗಿ ಮಾಹಿತಿ ನೀಡದ ವ್ಯಕ್ತಿಯು, ಕ್ವಾರಂಟೈನ್ ಕೇಂದ್ರದಿಂದ ತಪ್ಪಿಸಿಕೊಂಡು ಬಂದಿರುವ ಶಂಕೆ ಕೂಡ ವ್ಯಕ್ತವಾಗಿದೆ. ಇದರಿಂದ ಜಮಖಂಡಿ ನಗರದ ಜನರಲ್ಲಿ ಆತಂಕ ಮೂಡಿಸಿದೆ.