ಬಾಗಲಕೋಟೆ: ಹುನಗುಂದ ಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ್ ಅವರು, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಬಗ್ಗೆ ಮಾಡಿರುವ ಆರೋಪಕ್ಕೆ ಹುನಗುಂದ ಹಾಗೂ ಇಲಕಲ್ಲ ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು, ತಾ.ಪಂ ಅಧ್ಯಕ್ಷರು ತಿರುಗೇಟು ನೀಡಿದ್ದಾರೆ.
ಮತಿಭ್ರಮಣೆ ಆಗಿರುವುದು ಮಾಜಿ ಶಾಸಕರಿಗೆ ಅಲ್ಲ, ಹಾಲಿ ಶಾಸಕರಿಗೆ: ಗಂಗಾಧರ ದೊಡ್ಡಮನಿ - lost conscious is not for former legislator
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಬಗ್ಗೆ ಶಾಸಕ ದೊಡ್ಡನಗೌಡ ಪಾಟೀಲ್ ಮಾಡಿರುವ ಆರೋಪಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರು, ತಾ.ಪಂ ಅಧ್ಯಕ್ಷರು ತಿರುಗೇಟು ನೀಡಿದ್ದಾರೆ.
ಬಾಗಲಕೋಟೆ ನವನಗರದ ಪ್ರೆಸ್ ಕ್ಲಬ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮತಿಭ್ರಮಣೆ ಆಗಿರುವುದು ಮಾಜಿ ಶಾಸಕರಿಗೆ ಅಲ್ಲ. ಹಾಲಿ ಶಾಸಕರಿಗೆ. 60 ವರ್ಷ ಮೇಲ್ಪಟ್ಟ ಶಾಸಕರಿಗೆ ಅರಳು ಮರಳಾಗುತ್ತಿದೆ. ಕ್ಷೇತ್ರದಲ್ಲಿ ಅಕ್ರಮ ಮರಳು,ಅಕ್ರಮ ಅಕ್ಕಿ ಸಾಗಾಣಿಕೆ ಮಾಡುತ್ತಿರುವವರು ಹಾಲಿ ಶಾಸಕ ದೊಡ್ಡನಗೌಡ ಪಾಟೀಲ್ ಬೆಂಬಲಿಗರು. ಗುಂಡಾಗಿರಿ ಮಾಡುತ್ತಿರುವವರು ಬಿಜೆಪಿ ಪಕ್ಷದ ಕಾರ್ಯಕರ್ತರು ಎಂದು ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷರಾದ ಗಂಗಾಧರ ದೊಡ್ಡಮನಿ ಆರೋಪಿಸಿದ್ದಾರೆ.
ಇದೇ ಸಮಯದಲ್ಲಿ ಹುನಗುಂದ ತಾ.ಪಂ ಅಧ್ಯಕ್ಷರಾದ ಅನಿಲ್ ನಾಡಗೌಡ ಮಾತನಾಡಿ,ಕೊರೊನಾ ಸಮಯದಲ್ಲಿ ಶಾಸಕರಾದ ಪಾಟೀಲರು ತಾ.ಪಂಚಾಯಿತಿ, ನಗರಸಭೆ ಸದಸ್ಯರನ್ನು ಕರೆದು ಒಂದೇ ಒಂದು ಸಭೆ ಮಾಡಿಲ್ಲ. ಹೀಗೆ ಆದ್ರೆ ಕೊರೊನಾ ಜಾಗೃತಿ ಮೂಡಿಸುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದು, ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವಾಗದೆ ಜನ ಪರದಾಡುತ್ತಿದ್ದಾರೆ ಎಂದು ಆರೋಪಿಸಿದರು.