ಬಾಗಲಕೋಟೆ: ಜಿಲ್ಲೆಯ ಪ್ರವಾಹ ಪೀಡಿತ ಎಲ್ಲಾ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕರು, ಸಂಸದರು ಸಂತ್ರಸ್ತರ ಸಮಸ್ಯೆ ಆಲಿಸಿದರು.
ಬಾಗಲಕೋಟೆ ತಾಲೂಕಿನ ನಾಯನೇಗಲಿ, ಮಂಕಣಿ ಸೇರಿದಂತೆ ನೆರೆ ಪ್ರದೇಶಗಳಿಗೆ ಸಂಸದೆ ಶೋಭಾ ಕರಂದ್ಲಾಜೆ ಪರಿಶೀಲನೆ ನಡೆಸಿದರು. ಕೃಷ್ಣಾ ನದಿಯಿಂದ ಉಂಟಾಗಿರುವ ಪ್ರವಾಹದ ಕುರಿತು ಶಾಸಕ ವೀರಣ್ಣ ಚರಂತಿಮಠ ವಿವರಿಸಿದರು.
ಈ ಸಂದರ್ಭದಲ್ಲಿ ಶೋಭಾ ಕರಂದ್ಲಾಜೆ, ಸಂತ್ರಸ್ತರಿಗೆ ಸರ್ಕಾರದಿಂದ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು.
ಸಂತ್ರಸ್ಥರಿಗೆ ಅಭಯ ನೀಡಿದ ಶಾಸಕರು, ಸಂಸದರು ಇನ್ನೊಂದೆಡೆ ಶಾಸಕ ಬಿ.ಶ್ರೀರಾಮಲು, ಪಟ್ಟದಕಲ್ಲು, ನಂದಿಕೇಶ್ವರ, ಶಿವಯೋಗಿ ಮಂದಿರ ಸೇರಿದಂತೆ ವಿವಿಧ ಪ್ರದೇಶದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಜನ ಆರಿಸಿ ಕಳಿಸಿದ ಸಿದ್ದರಾಮಯ್ಯ ಅವರು ಕ್ಷೇತ್ರಕ್ಕೆ ಬಂದು ಸಮಸ್ಯೆ ಆಲಿಸಬೇಕು ಎಂದು ಒತ್ತಾಯಿಸಿದರು.
ಇನ್ನೊಂದೆಡೆ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಬಾದಾಮಿ ತಾಲೂಕಿನ ಕಿತ್ತಳಿ, ಹೆಬ್ಬಳ್ಳಿ, ಪಟ್ಟದಕಲ್ಲು, ಕೂಡಲಸಂಗಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.