ಕರ್ನಾಟಕ

karnataka

ನಾಮನಿರ್ದೇಶನಗೊಂಡಿರುವವರ ಮತ ಹೊರತು ಪಡಿಸಿ ಇತರೆ ಮತ ಎಣಿಕೆಗೆ ಹೈಕೋರ್ಟ್ ಆದೇಶ

By

Published : Nov 25, 2020, 4:15 PM IST

ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಮತ ಎಣಿಕೆ ವಿಚಾರ ಸಂಬಂಧ ಹೈಕೋರ್ಟ್ ಆದೇಶ ನೀಡಿದೆ. ಸರ್ಕಾರದಿಂದ ನಾಮನಿರ್ದೇಶನಗೊಂಡಿರುವ ಸಿದ್ಧನಗೌಡ ಪಾಟೀಲರ ಮತ ಹೊರತು ಪಡಿಸಿ ಇತರೆ ಮತಗಳ ಎಣಿಕೆಗೆ ಆದೇಶಿಸಿದೆ.

vote
ಹೈಕೋರ್ಟ್ ಆದೇಶ

ಬಾಗಲಕೋಟೆ :ಪ್ರತಿಷ್ಠಿತ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಮತದಾನ ಎಣಿಕೆ ಸಂಬಂಧ ಹೈಕೋರ್ಟ್ ಆದೇಶ ನೀಡಿದೆ. ಸರ್ಕಾರದಿಂದ ನಾಮನಿರ್ದೇಶನಗೊಂಡಿರುವ ಸಿದ್ಧನಗೌಡ ಪಾಟೀಲರ ಮತ ಹೊರತು ಪಡಿಸಿ ಇತರೆ ಮತಗಳ ಎಣಿಕೆಗೆ ನ್ಯಾಯಾಲಯ ಆದೇಶಿಸಿದೆ. ಬ್ಯಾಂಕ್ ಗೆ ಸರ್ಕಾರ ನೇಮಕ ಮಾಡಿರುವ ನಾಮ ನಿರ್ದೇಶಿತ ಸದಸ್ಯನ ವಿಚಾರವಾಗಿ ಕಾಂಗ್ರೆಸ್ ನವರು ನ್ಯಾಯಾಲಯದ ಮೊರೆ ಹೋಗಿದ್ದರು.

ಡಿಸಿಸಿ ಬ್ಯಾಂಕ್ ಅಧಿಕಾರ ಗದ್ದುಗೆ ಏರುವ ನಿಟ್ಟಿನಲ್ಲಿ ಕಾಂಗ್ರೆಸ್, ಬಿಜೆಪಿ ಬೆಂಬಲಿಗರು ಉತ್ಸುಕರಾಗಿದ್ದಾರೆ. ಆದರೆ, ಎಲೆಕ್ಷನ್​ನಲ್ಲಿ ಅಡ್ಡ ಮತದಾನವಾಗಿದ್ದು, ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತೆ ಅನ್ನೋ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತರಾಗಿ ಬಾದಾಮಿಯ ಕುಮಾರ ಜನಾಲಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ತಪಶೆಟ್ಟಿ ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್​ ಬೆಂಬಲಿತರಾಗಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಅಜಯ್​ಕುಮಾರ್ ಸರ್​ನಾಯಕ್, ಉಪಾಧ್ಯಕ್ಷ ಸ್ಥಾನಕ್ಕೆ ಮುರುಗೇಶ ಕಡ್ಲಿಮಟ್ಟಿ ಅಖಾಡದಲ್ಲಿದ್ದಾರೆ.

ಒಟ್ಟು 15 ಮತಗಳು ಚಲಾವಣೆ ಆಗಿದ್ದು, 8 ಮತಗಳು ಪಡೆದವರು ಆಯ್ಕೆ ಆಗಲಿದ್ದಾರೆ. ಇದರಲ್ಲಿ ಸರ್ಕಾರದಿಂದ ನೇಮಕವಾಗಿರುವ ನಾಮ ನಿರ್ದೇಶಿತ ಸದಸ್ಯ ಸಿದ್ದನಗೌಡ ಪಾಟೀಲ ಅವರ ಮತದಾನವನ್ನು ತಡೆ ಹಿಡಿಯಲಾಗಿದೆ. ಉಳಿದ ಮತಗಳನ್ನು ಎಣಿಕೆ ಮಾಡುವಂತೆ ನ್ಯಾಯಾಲಯವು ಚುನಾವಣಾಧಿಕಾರಿಗಳಿಗೆ ಆದೇಶಿಸಿದೆ.

ಕೋರ್ಟ್ ಆದೇಶ ಪ್ರತಿ ಜಿಲ್ಲಾಧಿಕಾರಿಗಳಿಗೆ ತಲುಪಿದ ಬಳಿಕ ಮತ ಎಣಿಕೆ ಮಾಡಲಾಗುತ್ತದೆ.

ABOUT THE AUTHOR

...view details