ಬಾಗಲಕೋಟೆ: ಮಾರುಕಟ್ಟೆ ಬಂದ್ ಆಗಿರುವ ಹಿನ್ನೆಲೆ ರೈತರು ಬೆಳದ ಬೆಳೆ ಹಾಗೂ ಹಣ್ಣುಗಳ ಮಾರಾಟಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಹಾಗಾಗಿ ರೈತರು ನಿರಾಶರಾಗಬಾರದು ಎಂದು ಜಿಲ್ಲಾಧಿಕಾರಿ ಡಾ. ಕೆ.ರಾಜೇಂದ್ರ ತಿಳಿಸಿದ್ದಾರೆ.
ರೈತರು ಬೆಳದ ಬೆಳೆಗಳ ಮಾರಾಟಕ್ಕೆ ಸೂಕ್ತ ಕ್ರಮ: ಬಾಗಲಕೋಟೆ ಡಿಸಿ - Dr. K. Rajendra statement
ರೈತರು ಬೆಳದ ಬೆಳೆ ಹಾಗೂ ಹಣ್ಣುಗಳ ಮಾರಾಟಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ.ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಲ್ಲಾ ಕಡೆ ಬಂದ್ ಆಗಿರುವುದರಿಂದ ರೈತರು ಬೆಳೆದ ಕಲ್ಲಂಗಡಿ, ದ್ರಾಕ್ಷಿ ಹಣ್ಣು ಸೇರಿದಂತೆ ಇತರ ಬೆಳೆಗಳು ಮಾರಾಟ ಆಗದೆ ನಾಶ ಮಾಡಲಾಗುತ್ತದೆ ಎಂಬ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮಾರಾಟಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ದೂರವಾಣಿ ಮೂಲಕ ತಿಳಿಸಿದ್ದಾರೆ.
ಈಗಾಗಲೇ ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳನ್ನು ರೈತರ ತೋಟಕ್ಕೆ ಕಳುಹಿಸಿ ಎಲ್ಲಾ ಮಾಹಿತಿ ಪಡೆಯುವ ಕಾರ್ಯ ನಡೆದಿದೆ. ರೈತರಿಂದ ಖರೀದಿ ಮಾಡಿ ಹಾಪ್ ಕಾಮ್ಸ್ ಮೂಲಕ ಮಾರಾಟ ಮಾಡಲಾಗುವುದು. ಹೀಗಾಗಿ ರೈತರು ಯಾವುದೇ ಆತಂಕ ಪಡದೆ ನಿರಾಶ ಭಾವನೆ ಹೊಂದಬಾರದು ಎಂದರು.