ಬಾಗಲಕೋಟೆ: ಕೊರೊನಾ ಭೀತಿಯಿಂದ ರೆಡ್ ಝೋನ್ ಆಗಿರುವ ಟೆಂಗಿನಮಠ ಪ್ರದೇಶದಲ್ಲಿ ಜನರಿಗೆ ಸರ್ಕಾರ ಸೇರಿದಂತೆ ಯಾವುದೇ ಸಂಘಟನೆಯವರು, ಪಕ್ಷದವರು ಆಹಾರ ಕಿಟ್ ವಿತರಣೆ ಮಾಡುತ್ತಿಲ್ಲ ಎಂದು ಹಳೆ ನಗರದ ಕೆಲ ಪ್ರದೇಶದ ನಿವಾಸಿಗಳು ಆರೋಪಿಸಿದ್ದಾರೆ.
ಆಹಾರ ಸಾಮಗ್ರಿಗಾಗಿ ಬಾಗಲಕೋಟೆ ಟೆಂಗಿನಮಠ ನಿವಾಸಿಗಳ ಮೊರೆ..! - ಟೆಂಗಿನಮಠ ಗ್ರಾಮಸ್ಥರ ಮನವಿ
ಟೆಂಗಿನಮಠದ ವಾರ್ಡ್ 5 ರಿಂದ 14 ರವರೆಗಿನ ಪ್ರದೇಶವನ್ನು ಕೊರೊನಾ ವೈರಸ್ ಸೋಂಕಿತ ಪ್ರದೇಶವೆಂದು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಈ ಹಿನ್ನೆಲೆ ಸರ್ಕಾರದಿಂದ ಪಡಿತರ ಧಾನ್ಯಗಳನ್ನು ವಿತರಣೆ ಮಾಡುವುದು ಬಿಟ್ಟರೆ, ಯಾವುದೇ ಸಂಘಟನೆಯವರು ತರಕಾರಿ ಸೇರಿದಂತೆ ಇತರ ದವಸ ಧಾನ್ಯಗಳನ್ನು ವಿತರಿಸುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ.
ನಗರದ ಟೆಂಗಿನಮಠದ ವಾರ್ಡ್ ನಂ.5 ರಿಂದ14 ರವರೆಗಿನ ಪ್ರದೇಶವನ್ನು ಕೊರೊನಾ ವೈರಸ್ ಸೋಂಕಿತ ಪ್ರದೇಶವೆಂದು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಈ ಪ್ರದೇಶದಲ್ಲಿ ನೂರಾರು ಕೂಲಿ ಕಾರ್ಮಿಕರ ಕುಟುಂಬಗಳು ವಾಸವಾಗಿವೆ. ಆದರೆ ಇಲ್ಲಿನ ಜನತೆಗೆ ಸರ್ಕಾರದಿಂದ ಸಿಗುವ ಪಡಿತರ ಧಾನ್ಯ ಬಿಟ್ಟರೆ ಮತ್ತೇನೂ ಸಿಗುತ್ತಿಲ್ಲ. ಯಾವುದೇ ಸಂಘಟನೆಯವರು ಹೋಗಿ ತರಕಾರಿ ಸೇರಿದಂತೆ ಇತರ ದವಸ ಧಾನ್ಯಗಳನ್ನು ನೀಡಿಲ್ಲ. ಅಲ್ಲದೇ ಈ ಪ್ರದೇಶದಲ್ಲಿ ಪೊಲೀಸ್ ಭದ್ರತೆ ಇರುವುದರಿಂದ ಜನ ಹೊರಗೆ ಹೋಗಲು ಅವಕಾಶ ನೀಡುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ನಮ್ಮಲ್ಲಿ ಯಾವುದೇ ಕೊರೊನಾ ವೈರಸ್ ಇಲ್ಲ. ಆದರೂ ಯಾರೂ ಬಂದು ಯಾವುದೇ ಸಾಮಗ್ರಿ ಕೊಡುತ್ತಿಲ್ಲ. ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ದಯವಿಟ್ಟು ದಾನಿಗಳು ಸಹಾಯ ಹಸ್ತ ಚಾಚಿರಿ ಎಂದು ಗ್ರಾಮದ ವೃದ್ಧರು, ಮಹಿಳೆಯರು ಮನವಿ ಮಾಡಿದ್ದಾರೆ.