ಕರ್ನಾಟಕ

karnataka

ETV Bharat / state

ಶೃಂಗೇರಿ ಶಾರದಾ ಪೀಠದ ವತಿಯಿಂದ ಬನಶಂಕರಿ ದೇವಸ್ಥಾನದಲ್ಲಿ ತತ್ವ ಜಪ ಕಾರ್ಯಕ್ರಮ - ಬನಶಂಕರಿ ದೇವಸ್ಥಾನದ

ನಮಃ ಶಂಕರಾಯ ಜಪಯಾಜ್ಞದ ಬಗ್ಗೆ ವಿವರವಾದ ಮಾಹಿತಿ ನೀಡಿ ಎಲ್ಲರೂ ಮನೆಮನೆಗಳಲ್ಲಿ ನಮಃ ಶಂಕರಾಯ ಜಪ ಮಾಡುವಂತೆ ತಿಳಿಸಿದರು. ಈ‌ ಮೂಲಕ‌ ತಮ್ಮ ಕಷ್ಟಕಾರ್ಪಣ್ಯ ಹೋಗಲಾಡಿಸುವಂತಾಗುತ್ತದೆ..

tattva-japa-program-at-banashankari-temple-by-sringeri-sarada-peetha
ಬನಶಂಕರಿ ದೇವಸ್ಥಾನದಲ್ಲಿ ತತ್ವ ಜಪ ಕಾರ್ಯಕ್ರಮ

By

Published : Apr 19, 2021, 6:44 PM IST

ಬಾಗಲಕೋಟೆ :ಜಿಲ್ಲೆಯ ಬಾದಾಮಿ ತಾಲೂಕಿನ ಶಕ್ತಿ ಪೀಠಗಳಲ್ಲಿ ಒಂದಾದ ಸುಕ್ಷೇತ್ರ ಬನಶಂಕರಿ ದೇವಸ್ಥಾನದಲ್ಲಿ ದಕ್ಷಿನಾಮನಾಯ ಶ್ರೀ ಶೃಂಗೇರಿ ಶಾರದಾ ಪೀಠದ ವತಿಯಿಂದ ತತ್ವ ಜಪ ಕಾರ್ಯಕ್ರಮಕ್ಕೆ ಚಾಲನೆ‌ ನೀಡಲಾಯಿತು.

ಶೃಂಗೇರಿಯ ಶ್ರೀ ಶಂಕರಾಚಾರ್ಯ ತತ್ವ ಜಪ ಕಾರ್ಯಕ್ರಮಕ್ಕೆ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು, ಶ್ರೀ ವಿದುಶೇಖರ ಭಾರತಿ ಮಹಾಸ್ವಾಮಿಗಳವರ ಭಾವಚಿತ್ರಕ್ಕೆ ಪೂಜಾವಿಧಿ ವಿಧಾನಗಳನ್ನು ಅರ್ಚಕರಾದ ರಾಮ್ ಭಟ್ ಜೋಶಿ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಶೃಂಗೇರಿ ಶಾರದಾ ಪೀಠದ ವತಿಯಿಂದ ಬನಶಂಕರಿ ದೇವಸ್ಥಾನದಲ್ಲಿ ತತ್ವ ಜಪ ಕಾರ್ಯಕ್ರಮ

ನಮಃ ಶಂಕರಾಯ ಜಪಯಾಜ್ಞದ ಬಗ್ಗೆ ವಿವರವಾದ ಮಾಹಿತಿ ನೀಡಿ ಎಲ್ಲರೂ ಮನೆಮನೆಗಳಲ್ಲಿ ನಮಃ ಶಂಕರಾಯ ಜಪ ಮಾಡುವಂತೆ ತಿಳಿಸಿದರು. ಈ‌ ಮೂಲಕ‌ ತಮ್ಮ ಕಷ್ಟಕಾರ್ಪಣ್ಯ ಹೋಗಲಾಡಿಸುವಂತಾಗುತ್ತದೆ ಎಂದರು.

ಇದೇ ಸಮಯದಲ್ಲಿ ಕಾರ್ಯಕ್ರಮದ ಕರಪತ್ರಗಳನ್ನು ಎಲ್ಲರಿಗೂ ವಿತರಿಸಿ, ನಮಃ ಶಂಕರಾಯ ಜಪದ ಮಂತ್ರಗಳನ್ನು ಪಠಿಸಲಾಯಿತು. ಇದೇ ಸಂದರ್ಭದಲ್ಲಿ ರಮೇಶ ಭಟ್ ಪೂಜಾರ, ವಸಂತ ಭಟ್ ಪೂಜಾರ, ವಿದ್ಯಾಧರ್ ಪೂಜಾರ, ಆನಂದ್ ಭಟ್ ಜೋಶಿ ಸಂಚಾಲಕರು ಶಂಕರತತ್ವ ಹೇಳುವ ಜೊತೆಗೆ ಪ್ರತಿಯೊಬ್ಬರು ಮನೆಯಲ್ಲಿ ತತ್ವ ಜಪ ಮಾಡುವ ಮೂಲಕ ಶಂಕರಾಚಾರ್ಚಯರನ್ನು ಮನದಲ್ಲಿ‌ ನೆಲೆಸುವಂತಾಗಬೇಕು ಎಂದರು.

ವಿಕ್ರಂ ಪೂಜಾರ, ಅರ್ಚಕರು, ಉದಯ ರಘುವಿರಮಠ, ದೇಶಪಾಂಡೆ, ಜೋಶಿ, ಕುಲಕರ್ಣಿ ದೀಕ್ಷಿತ್ ಬಂಧುಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.

ABOUT THE AUTHOR

...view details