ಬಾಗಲಕೋಟೆ:ಕೋವಿಡ್-19 ಹಿನ್ನೆಲೆ ಉತ್ತರ ಕರ್ನಾಟಕದಲ್ಲಿಯೇ ವೈಶಿಷ್ಟ್ಯಪೂರ್ಣವಾಗಿ ಪಟಾಕಿ ಜಾತ್ರೆಯೆಂದೇ ಗುರ್ತಿಸಿಕೊಂಡಿದ್ದ ಬನಹಟ್ಟಿಯ ಪವಾಡ ಪುರುಷ ಕಾಡಸಿದ್ಧೇಶ್ವರ ಜಾತ್ರೆ ಈ ಬಾರಿ ಯಾವುದೇ ವಾದ್ಯ ವೃಂದ, ಧ್ವನಿವರ್ಧಕವಿಲ್ಲದೆ ಸಾಂಕೇತಿಕವಾಗಿ ನಡೆದಿದೆ.
ಪ್ರತೀ ವರ್ಷ ರಥೋತ್ಸವದ ಮುಂದೆ ಲಕ್ಷಾಂತರ ರೂ.ಗಳ ಮದ್ದು ಸುಡುವ ಕಾರ್ಯಕ್ರಮ ಮಧ್ಯಾಹ್ನ 2 ಗಂಟೆಯಿಂದಲೇ ನಡೆಯುತ್ತಿತ್ತು. ಆದರೆ ಕೋವಿಡ್ನಿಂದಾಗಿ ಪೊಲೀಸ್ ಭದ್ರತೆಯಲ್ಲಿ ಹಾಗೂ ತಾಲೂಕಾಡಳಿತದ ಸೂಚನೆ ಮೇರೆಗೆ ಜಾತ್ರಾ ಕಮಿಟಿ ಕಾನೂನಿನ ನಿಯಮದಡಿ ಹಾಗೂ ಸಾಂಸ್ಕೃತಿಕವಾಗಿ ಧಕ್ಕೆಯಾಗದಂತೆ ಮಂಗಳವಾರ ಕಾಡಸಿದ್ಧೇಶ್ವರ ಜಾತ್ರೆ ಸರಳವಾಗಿ ನೆರವೇರಿತು.