ಕರ್ನಾಟಕ

karnataka

ETV Bharat / state

ಬಾಗಲಕೋಟೆ: ಮನ್ ಕಿ ಬಾತ್ ಕಾರ್ಯಕ್ರಮ ಕುರಿತು ಕೊಂಚ ನಿರಾಸೆ ವ್ಯಕ್ತಪಡಿಸಿದ ಸ್ವಾಮೀಜಿ - Swamiji expressed his displeasure over Man Ki Baat

ಶಿವಯೋಗ ಮಂದಿರದಲ್ಲಿ ಈ ಹಿಂದೆ ಸೋನಿಯಾ ಗಾಂಧಿ ಸೇರಿದಂತೆ ರಾಜ್ಯದ ಇತರ ಮುಖಂಡರು ಈ ಕ್ಷೇತ್ರಕ್ಕೆ ಆಗಮಿಸಿ ಧಾರ್ಮಿಕ ನೆಲದ ಬಗ್ಗೆ ಗುಣಗಾಣ ಮಾಡಿದ್ದಾರೆ. ವಟುಗಳ ತಯಾರಿಕೆ ಕೇಂದ್ರ, ಗೋ‌ ಶಾಲೆ ಸೇರಿದಂತೆ ಸಂಸ್ಕಾರ ಬೆಳೆಸುವ ಮಠವಾಗಿದ್ದರಿಂದ ಹೆಚ್ಚು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ ಎಂದು ತಿಳಿಸಿದರು.

Shivayogi temple
ಶಿವಯೋಗಿ ಮಂದಿರದಲ್ಲಿ ಮಠಾಧೀಶರು

By

Published : Dec 26, 2021, 11:03 PM IST

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರ ಇಂದಿನ ಮನ್​ ಕಿ ಬಾತ್​ ಕಾರ್ಯಕ್ರಮದಲ್ಲಿ ಜಿಲ್ಲೆಯ ಶಿವಯೋಗಿ ಮಂದಿರದ ದೃಶ್ಯಗಳನ್ನ ಪ್ರಸಾರ ಮಾಡಿದ್ದು, ಒಂದೆಡೆ ಸ್ವಾಮೀಜಿಗಳಲ್ಲಿ ಸಂತಸ ಕಂಡು ಬಂದರೆ ಮತ್ತೊಂದೆಡೆ ಅದರ ಬಗ್ಗೆ ಪ್ರಸ್ತಾಪ ಮಾಡದಿರೋದಕ್ಕೆ ಕೊಂಚ ನಿರಾಸೆ ವ್ಯಕ್ತವಾಗಿದೆ.

ಸದಾಶಿವ ಸ್ವಾಮೀಜಿ ಮಾತನಾಡಿದರು

ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದ್ದ ಮೋದಿ ಅವರ ಮನ್​ ಕಿ ಬಾತ್​ ಕಾರ್ಯಕ್ರಮದಲ್ಲಿ ಪೂರ್ವನಿಯೋಜಿತವಾಗಿ ಶಿವಯೋಗಿ ಮಂದಿರದಲ್ಲಿನ ಮಠಾಧೀಶರು, ವಟುಗಳು ಹಾಗೂ ರಾಜ್ಯದಲ್ಲಿ ಅತಿ ಹೆಚ್ಚು ನೇಕಾರರನ್ನ ಹೊಂದಿರುವ ಜಿಲ್ಲೆಯ ನೇಕಾರರ ಮುಖಂಡರು ಪಾಲ್ಗೊಂಡಿದ್ದರು.

ಇತ್ತ ಮಠಾಧೀಶರು ಮತ್ತು ನೇಕಾರರು ಉಪಸ್ಥಿತರಿದ್ದ ವಿಡಿಯೋ ಮೋದಿ ಅವರ ಮನ್​ ಕಿ ಬಾತ್​ನಲ್ಲಿ ಆಗಾಗ ಕಾಣಿಸಿಕೊಂಡಿದ್ದು ಒಂದೆಡೆ ಸಂತಸ ತಂದಿತ್ತು. ಆದರೆ, ಮಠದ ಬಗ್ಗೆ ಮತ್ತು ನೇಕಾರರ ಬಗ್ಗೆ ಪೂರ್ವ ನಿಯೋಜಿತದಂತೆ ಮೋದಿ ಮಾತನಾಡದೇ ಇರೋದು ಎಲ್ಲೋ ಒಂದು ಕಡೆ ಕೊಂಚ ನಿರಾಸೆಯನ್ನ ತಂದಿತ್ತು.

ಈ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಸದಾಶಿವ ಸ್ವಾಮೀಜಿಗಳು, ಇಂದಿನ ಮನ್​ ಕಿ ಬಾತ್​ನಲ್ಲಿ ಪ್ರಸ್ತಾಪ ಮಾಡದೇ ಇದ್ರೂ ಮುಂದಿನ ದಿನಗಳಲ್ಲಿ ಅವರು ಪ್ರಸ್ತಾಪಿಸುತ್ತಾರೆಂಬ ಭರವಸೆ ಇದೆ. ಇವುಗಳ ಮಧ್ಯೆ ಈ ಹಿಂದೆ ಅಮಿತ್ ಶಾ ಇಲ್ಲಿಗೆ ಬಂದು ಹೋಗಿದ್ರು, ಅವರು ಸಹ ಮೋದಿ ಅವರಿಗೆ ಮಠದ ಬಗ್ಗೆ ಹೇಳಬಹುದು ಎಂದರು.

ಶಿವಯೋಗ ಮಂದಿರದಲ್ಲಿ ಈ ಹಿಂದೆ ಸೋನಿಯಾ ಗಾಂಧಿ ಸೇರಿದಂತೆ ರಾಜ್ಯದ ಇತರ ಮುಖಂಡರು ಈ ಕ್ಷೇತ್ರಕ್ಕೆ ಆಗಮಿಸಿ ಧಾರ್ಮಿಕ ನೆಲದ ಬಗ್ಗೆ ಗುಣಗಾಣ ಮಾಡಿದ್ದಾರೆ. ವಟುಗಳ ತಯಾರಿಕೆ ಕೇಂದ್ರ, ಗೋ‌ ಶಾಲೆ ಸೇರಿದಂತೆ ಸಂಸ್ಕಾರ ಬೆಳೆಸುವ ಮಠವಾಗಿದ್ದರಿಂದ ಹೆಚ್ಚು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ ಎಂದು ತಿಳಿಸಿದರು.

ಓದಿ:ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಮಾರಾಟ ಯತ್ನ : ಸುಡಾನ್ ಪ್ರಜೆಯ ಬಂಧನ

For All Latest Updates

TAGGED:

ABOUT THE AUTHOR

...view details