ಕರ್ನಾಟಕ

karnataka

ETV Bharat / state

ಗುರು ಭವನ ನಿರ್ಮಾಣದಲ್ಲಿ ಲಕ್ಷಾಂತರ ರೂ. ಅವ್ಯವಹಾರ ಆರೋಪ.. ಇಬ್ಬರು ಶಿಕ್ಷಕರ ಅಮಾನತು - ಶಿಕ್ಷಕರ ಅಮಾನತು

ಗುರು ಭವನ ನಿರ್ಮಾಣದಲ್ಲಿ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ನಡೆಸಿದ ಇಬ್ಬರು ಶಿಕ್ಷಕರನ್ನು ಬೀಳಗಿ ತಾಲೂಕಿನ ಬಿಇಒ ಹೆಚ್ ಡಿ ಮಿರ್ಜಿ ಅಮಾನತು ಮಾಡಿದ್ದಾರೆ.

ಗುರು ಭವನ ನಿರ್ಮಾಣ ಕಾರ್ಯ

By

Published : Sep 17, 2019, 10:03 AM IST

ಬಾಗಲಕೋಟೆ:ಗುರು ಭವನ ನಿರ್ಮಾಣದಲ್ಲಿ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ನಡೆಸಿದ ಇಬ್ಬರು ಶಿಕ್ಷಕರನ್ನು ಬೀಳಗಿ ತಾಲೂಕಿನ ಬಿಇಒ ಹೆಚ್ ಡಿ ಮಿರ್ಜಿ ಅಮಾನತು ಮಾಡಿದ್ದಾರೆ.

ಬೀಳಗಿ ತಾಲೂಕಿನ ತೆಗ್ಗಿ ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯ ಶಿಕ್ಷಕ ಬಿ ಎಸ್ ಗೋನಾಳ ಹಾಗೂ ಸಿದ್ದಾಪೂರ ಗ್ರಾಮದ ಎಂ ಪಿ ಎಸ್ ಶಾಲೆಯ ಬಿ ಎಸ್ ಕಟಾನಿ ಎಂಬುವ ಶಿಕ್ಷಕರು ನಕಲಿ ಸಮಿತಿ ರಚನೆ ಮಾಡಿ, ಬ್ಯಾಂಕಿನಿಂದ‌ 4.50 ಲಕ್ಷ ಹಣ ಡ್ರಾ ಮಾಡಿಕೊಂಡು ಅವ್ಯವಹಾರ ಮಾಡಿರುವುದಕ್ಕೆ ಅಮಾನತು ಮಾಡಲಾಗಿದೆ.

ಘಟನೆಯ ವಿವರ :ಬೀಳಗಿ ಪಟ್ಟಣದಲ್ಲಿ ಗುರು ಭವನ ನಿರ್ಮಾಣ ಕಾರ್ಯ ಹಿನ್ನೆಲೆ ವಿವಿಧ ಶಿಕ್ಷಕರಿಂದ 10.50 ಲಕ್ಷ ದೇಣಿಗೆ ಸಂಗ್ರಹ ಮಾಡಿ ಬ್ಯಾಂಕಿನಲ್ಲಿ ಇಡಲಾಗಿತ್ತು. ಹಣದ ಅವ್ಯವಹಾರ ಹಿನ್ನೆಲೆ ಗುರು‌ಭವನ ಕಟ್ಟಡ ಕಾಮಗಾರಿ ಸ್ತಗಿತಗೊಂಡಿತ್ತು.

ಗುರು ಭವನದ ಸಮಿತಿ ಮಾಡಿ ಅಧ್ಯಕ್ಷರು, ಬಿಇಒ, ಕಾರ್ಯದರ್ಶಿ, ಮುಖ್ಯ ಗುರುಗಳು ಇರುತ್ತಾರೆ. ಆದರೆ, ಈ ಇಬ್ಬರು ಶಿಕ್ಷಕರು ಸೇರಿಕೊಂಡು ತಾವೇ ನಕಲಿ ಸಮಿತಿ ರಚನೆ ಮಾಡಿ, ಖೊಟ್ಟಿ ದಾಖಲೆ ಸೃಷ್ಟಿ ಮಾಡಿ, ಅಧ್ಯಕ್ಷ, ಕಾರ್ಯದರ್ಶಿ ಎಂದು ಹಣ ಡ್ರಾ ಮಾಡಿಕೊಂಡಿದ್ದರು ಎನ್ನಲಾಗಿದೆ. ಗುರು ಭವನ ಕಾಮಗಾರಿ ವೀಕ್ಷಣೆ ತೆರಳಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಮಗ್ರ ಮಾಹಿತಿ ಪಡೆದುಕೊಳ್ಳುತ್ತಿರುವ ಸಮಯದಲ್ಲಿ ಹಣ ಅವ್ಯವಹಾರ ಆಗಿರುವ ಬಗ್ಗೆ ಬೆಳಕಿಗೆ ಬಂದಿದೆ.ಈ‌ ಬಗ್ಗೆ ಬಿಇಒ ಮಿರ್ಜಿ ಅವರು ಡಿಡಿಪಿಐ ಅವರ ಗಮನಕ್ಕೆ ತಂದ ನಂತರ ಮೇಲಾಧಿಕಾರಿಗಳ ಆದೇಶದ ಮೇಲೆ ಅಮಾನತು ಮಾಡಲಾಗಿದೆ ಎಂದು ಬಿಇಒ ಹೆಚ್ ಡಿ ಮಿರ್ಜಿ ಅವರು ಈಟಿವಿ ಭಾರತಕ್ಕೆ ಮಾಹಿತಿ‌ ನೀಡಿದರು.

ABOUT THE AUTHOR

...view details