ಕುಷ್ಟಗಿ: ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಮುರಡಿ ಗ್ರಾಮದಲ್ಲಿ ಕೊರೊನಾ ಶಂಕಿತನನ್ನು ಐಸೋಲೇಷನ್ ಮಾಡಲಾಗಿದ್ದು, ಈ ಭೀತಿಯಿಂದ ಗಡಿ ಭಾಗದ ಕುಷ್ಟಗಿ ತಾಲೂಕಿನ ಪಟ್ಟಲಚಿಂತೆ ಗ್ರಾಮದ ಮುಖ್ಯ ರಸ್ತೆಗೆ ನಿರ್ಬಂಧ ಹಾಕಲಾಗಿದೆ.
ಐಸೋಲೇಷನ್ನಲ್ಲಿ ಕೊರೊನಾ ಶಂಕಿತ ವ್ಯಕ್ತಿ: ಗ್ರಾಮದ ರಸ್ತೆ ಬಂದ್ ಮಾಡಿ ನಿರ್ಬಂಧ - ಬಾಗಲಕೋಟೆಯಲ್ಲಿ ಕೊರೊನಾ ಶಂಕಿತ
ಬಾಗಲಕೋಟೆಯಲ್ಲಿ ಕೊರೊನಾ ಶಂಕಿತ ವ್ಯಕ್ತಿಯನ್ನು ಐಸೋಲೇಷನ್ನಲ್ಲಿ ಇರಿಸಿದ್ದರಿಂದ ಕೊಪ್ಪಳ ಗಡಿ ಗ್ರಾಮದ ಮುಖ್ಯ ರಸ್ತೆಯನ್ನು ಮುಚ್ಚಲಾಗಿದೆ.

ಗ್ರಾಮಕ್ಕೆ ನಿರ್ಬಂಧ
ಕುಷ್ಟಗಿ ತಾಲೂಕಿನ ಪಟ್ಟಲಚಿಂತೆ ಹಾಗೂ ಹುನಗುಂದ ಗ್ರಾಮದ ಮುರಡಿ ಗ್ರಾಮಗಳು ಕೂಗಳತೆ ದೂರದಲ್ಲಿವೆ. ಮುರಡಿ ಗ್ರಾಮದ ಶಂಕಿತ ವ್ಯಕ್ತಿ ಹುನಗುಂದ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.
ಕೊಪ್ಪಳ ಜಿಲ್ಲೆಯು ಗ್ರೀನ್ ಝೂನ್ನಲ್ಲಿದ್ದು, ಪಟ್ಟಲಚಿಂತೆ ಗ್ರಾಮದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆ ತಡರಾತ್ರಿಯೇ ಜೆಸಿಬಿ ಬಳಸಿ ರಸ್ತೆ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ ಎಂದು ಸಿಪಿಐ ಚಂದ್ರಶೇಖರ ಜಿ. ಮಾಹಿತಿ ನೀಡಿದರು.