ಕರ್ನಾಟಕ

karnataka

ETV Bharat / state

ವೈದ್ಯೆಯಾಗುವ ಕನಸು ಕಂಡಿದ್ದ ವಿದ್ಯಾರ್ಥಿನಿಗೆ ಮೂಳೆ ಕ್ಯಾನ್ಸರ್​.. ಮಗಳ ಚಿಕಿತ್ಸೆಗೆ ಹಣಕಾಸಿನ ನೆರವು ಕೋರುತ್ತಿದೆ ಕುಟುಂಬ - ಸರ್ಕಾರದಿಂದ ಸಹಾಯ

ಉನ್ನತ ಶಿಕ್ಷಣದ ಕನಸು ಕಾಣುತ್ತಿರುವ ವಿದ್ಯಾರ್ಥಿನಿ ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗೆ ಸಾಕಷ್ಟು ಹಣದ ಅವಶ್ಯಕತೆ ಇದೆ. ಹೀಗಾಗಿ ಸಹೃದಯರು, ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ವಿದ್ಯಾರ್ಥಿನಿಯ ಕುಟುಂಬವಿದೆ.

A student who suffering from bone cancer
ಮೂಳೆ ಕ್ಯಾನ್ಸರ್ ತುತ್ತಾಗಿರುವ ವಿದ್ಯಾರ್ಥಿನಿ

By

Published : Jul 3, 2023, 12:08 PM IST

Updated : Jul 3, 2023, 2:58 PM IST

ಬಾಗಲಕೋಟೆ: ಬಡತನದಲ್ಲೂ ಛಲದಿಂದ ಓದಿದ ಈ ವಿದ್ಯಾರ್ಥಿನಿ ಪಿಯುಸಿಯಲ್ಲಿ ಶೇ 90ಕ್ಕೂ ಅಧಿಕ ಅಂಕ ಪಡೆದಿದ್ದಾರೆ. ನೀಟ್ ಪರೀಕ್ಷೆ ಬರೆದು ವೈದ್ಯೆಯಾಗಿ ಜನಸೇವೆ ಸಲ್ಲಿಸಬೇಕು ಎಂಬುದು ಇವರ ಮಹದಾಸೆ. ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ ಈ ಪ್ರತಿಭಾವಂತ ವಿದ್ಯಾರ್ಥಿನಿಗೆ ಆರೋಒಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಇವರಿಗೆ ಮೂಳೆ ಕ್ಯಾನ್ಸರ್‌ ಬಾಧಿಸುತ್ತಿರುವುದು ಕುಟುಂಬಕ್ಕೆ ಬರಸಿಡಲು ಬಡಿದಂತಾಗಿದೆ. ಹೀಗಾಗಿ ಪೋಷಕರು ತಮ್ಮ ಮಗಳ ಚಿಕಿತ್ಸೆಗಾಗಿ ಹಣಕಾಸು ನೆರವು ಯಾಚಿಸಿದ್ದಾರೆ.

ಹೌದು, ಬಾಗಲಕೋಟೆ ಜಿಲ್ಲೆಯ ಹುನಗುಂದದ ಬಡ ಕುಟುಂಬದ ಪ್ರತಿಭಾವಂತೆ ಸಹನಾ ವೆಂಕಣ್ಣ ಬೆನಕಡೋಣಿ ಚಿಕಿತ್ಸೆಗೆ ಕುಟುಂಬ ಹಣವಿಲ್ಲದೇ ಪರದಾಡುತ್ತಿದೆ. ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ವೈದ್ಯೆಯಾಗಬೇಕೆಂದು ನೀಟ್ ಪರೀಕ್ಷೆಗೂ ಸಜ್ಜಾಗಿದ್ದರು. ಆದರೆ ಮೂಳೆ ಕ್ಯಾನ್ಸರ್‌ನಿಂದಾಗಿ ವಿದ್ಯಾರ್ಥಿನಿ ಅಸಹಾಯಕಳಾಗಿದ್ದಾರೆ.

ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ.. ತಂದೆ ವೆಂಕಣ್ಣರಿಗೆ ನಾಲ್ಕು ಮಂದಿ ಹೆಣ್ಣು ಮಕ್ಕಳು. ಇವರ ಪೈಕಿ ಒಬ್ಬಳು ಬುದ್ಧಿಮಾಂದ್ಯ. ಮೊದಲೇ ಬಡತನದಿಂದ ತತ್ತರಿಸಿರುವ ಕುಟುಂಬಸ್ಥರು ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೆಣ್ಣು ಮಕ್ಕಳನ್ನೇ ತಮ್ಮ ಗಂಡು ಮಕ್ಕಳಂತೆ ಸಾಕಿದ್ದಾರೆ. ಸಹನಾ ಓದಿನಲ್ಲಿ ಮುಂದಿದ್ದು, ಅವರಿಗೆ ಕಷ್ಟಪಟ್ಟು ವಿದ್ಯಾಭ್ಯಾಸ ಕೊಡಿಸಿದ್ದಾರೆ. ಪೋಷಕರ ಈ ಬೆಂಬಲದಿಂದಾಗಿ ಸಹನಾ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ್ದಾರೆ.

ನೀಟ್​ ಪರೀಕ್ಷೆ ಬರೆಯಬೇಕೆನ್ನುವಷ್ಟರಲ್ಲಿ ಬಂದೆರೆಗಿದ ಕಾಯಿಲೆ.. ಇನ್ನೇನು ನೀಟ್ ಪರೀಕ್ಷೆಗೆ ತಯಾರಿ ಮಾಡುತ್ತಿರುವ ಸಮಯದಲ್ಲೇ ಆರೋಗ್ಯದಲ್ಲಿ ಏರುಪೇರಾಗಿದೆ. ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಬಳಿ ತೋರಿಸಿದಾಗ, ಮೂಳೆ ಕ್ಯಾನ್ಸರ್ ಇರುವುದು ತಿಳಿದು ಬಂದಿದೆ. ವೈದ್ಯರ ಸಲಹೆ ಮೂಲಕ ಬೆಂಗಳೂರಿಗೆ ತೆರಳಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ 11 ಲಕ್ಷ ರೂಪಾಯಿ ಸಾಲ ಪಡೆದು ಅದನ್ನು ಚಿಕಿತ್ಸೆ ವೆಚ್ಚ ಮಾಡಿದ್ದಾರೆ. ಈಗ ಮತ್ತಷ್ಟು ಹಣ ಬೇಕಾಗಿದ್ದು, ಕುಟುಂಬ ಸಂಕಷ್ಟದಲ್ಲಿದೆ.

ಮಗಳ ಆರೈಕೆಗೆ ಕೂಲಿ ಕೆಲಸ ಬಿಟ್ಟ ಪೋಷಕರು.. ಕೂಲಿ ಕೆಲಸ ಬಿಟ್ಟು ಮಗಳ ಆರೈಕೆಗಾಗಿ ತಂದೆ- ತಾಯಿ ಮಕ್ಕಳು ಸಮೇತ ಬೆಂಗಳೂರಿನ ಆಸ್ಪತ್ರೆಯಲ್ಲಿ ಇದ್ದಾರೆ. ಆದ್ದರಿಂದ ದಾನಿಗಳು, ಸಂಘ- ಸಂಸ್ಥೆಗಳು, ಜನಪ್ರತಿನಿಧಿಗಳು ಬಡ ಕುಟುಂಬಕ್ಕೆ ಸಹಾಯಹಸ್ತ ಚಾಚಬೇಕಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಡ ವಿದ್ಯಾರ್ಥಿನಿಯ ಚಿಕಿತ್ಸೆಗೆ ಸರ್ಕಾರದಿಂದ ಸಹಾಯ ಮಾಡಬೇಕು ಎಂದು ಕುಟುಂಬ ಮನವಿ ಮಾಡಿಕೊಂಡಿದೆ. ಮತ್ತು ಇತರೆ ಸಂಘ ಸಂಸ್ಥೆಯವರು ಸಹೃದಯಿಗಳು ತಮ್ಮ ಸಹಾಯ ಹಸ್ತ ಚಾಚಿದರೆ ಓರ್ವ ಪ್ರತಿಭಾವಂತೆಯ ಜೀವ ಉಳಿಸುವ ಮಾನವೀಯ ಕಾರ್ಯ ನಿಮ್ಮಿಂದ ಆಗಲಿದೆ.

ಅಳಲು ತೋಡಿಕೊಂಡ ತಂದೆ: ಈಗಾಗಲೇ ಮಗಳಿಗೆ ಚಿಕಿತ್ಸೆಗಾಗಿ 11 ಲಕ್ಷ ವೆಚ್ಚ ಮಾಡಿದ್ದೇನೆ. ಈಗ ಹೊಲ ಮನೆ ಕೊಟ್ಟು ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದೇನೆ. ಒಟ್ಟು ನಾಲ್ವರು ಹೆಣ್ಣು ಮಕ್ಕಳು‌ ಇದ್ದು, ಮೊದಲೇಯ ಮಗಳು ಬುದ್ಧಿಮಾಂದ್ಯ ಇದ್ದು, ಎರಡನೇ ಮಗಳಿಗೆ ಈಗ ಕ್ಯಾನ್ಸರ್ ಆಗಿದೆ. ಉಳಿದ ಇಬ್ಬರಲ್ಲಿ ಓರ್ವ ಮಗಳು ಹತ್ತನೇಯ ತರಗತಿಯಲ್ಲಿ ಓದುತ್ತಿದ್ದರೆ, ಇನ್ನೋರ್ವ ಮಗಳು ಏಳನೇ ತರಗತಿಯಲ್ಲಿ ಓದುತ್ತಿದ್ದಾಳೆ. ಪಿಯುಸಿ ಅಧ್ಯಯನ ನಂತರ ಸುಸ್ತಾಗಿ, ಆರಾಮ ಇಲ್ಲದ ಸಮಯದಲ್ಲಿ ಮೊದಲು ಹುನಗುಂದ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಿದ್ದೆವು. ಇಲ್ಲಿನ ವೈದ್ಯರು, ಎಂಆರ್​ಐ ಸ್ಕ್ಯಾನ್ ಮಾಡಬೇಕು ಎಂದು ಬಾಗಲಕೋಟೆಗೆ ಕಳುಹಿಸಿದ್ದರು. ಆಗ ವೈದ್ಯರು ನಿಮ್ಮ ಮಗಳ‌ ಜೀವಕ್ಕೆ ಅಪಾಯ ಇದೆ ಎಂದು ಹೇಳಿ ಬೆಂಗಳೂರಿಗೆ ಕಳುಹಿಸಿದರು. ಈಗಾಗಲೇ ಚಿಕಿತ್ಸೆಗೆ ಹಣ ಖರ್ಚು ಮಾಡಿದ್ದೇವೆ. ಇನ್ನು‌ ಮುಂದಿನ ಚಿಕಿತ್ಸೆಗೆ ಹಣದ ಅಗತ್ಯವಿದೆ. ಈ ಬಗ್ಗೆ ಯಾರಾದರೂ ಸಹಾಯ ಮಾಡಿದರೆ ಅನುಕೂಲವಾಗುತ್ತದೆ. ನಮಗೆ ಯಾವ ರಾಜಕೀಯ ನಾಯಕರು ಪರಿಚಯವೂ ಇಲ್ಲ. ನಮ್ಮಂತಹವರ ಬಗ್ಗೆ ಅವರು ಗಮನ ಕೊಡಬೇಕು. ಯಾರಾದರೂ ಸಹಾಯ ಮಾಡಿದರೆ, ಮಗಳಿಗೆ ಚಿಕಿತ್ಸೆ ಮುಂದುವರೆಸುತ್ತೇನೆ. ನಮ್ಮ ಕೈಯಲ್ಲಿ ಆದಷ್ಟೂ ಪ್ರಯತ್ನ ಮಾಡುತ್ತೇವೆ ನಂತರ ಕೈ ಚೆಲ್ಲಿ ಕುಳಿತುಕೊಳ್ಳುವ ಸ್ಥಿತಿ ಬರುತ್ತದೆ ಎಂದು ತಮ್ಮ ಅಸಹಾಯಕತೆಯನ್ನು ವಿದ್ಯಾರ್ಥಿನಿಯ ತಂದೆ ವೆಂಕಣ್ಣ ಬೆನಕಡೋಣಿ ಅವರು ಈಟಿವಿ ಭಾರತ ಜೊತೆ ದೂರವಾಣಿ ಮೂಲಕ ತೋಡಿಕೊಂಡಿದ್ದಾರೆ.

ಇವರ ಬ್ಯಾಂಕ್ ವಿವರ ಹೀಗಿದೆ.: Mr: Yankanna Channappa Benakadoni,
A/c no: 34856448616
IFSC: SBI:0001313
State bank of India
Hunugunda, Bagalakote dist.
ಫೋನ್ ನಂಬರ್: 7760743303 ವೆಂಕಣ್ಣ (ತಂದೆ)

ಇದನ್ನೂ ಓದಿ:KL Rahul helps Hubli student: ಕಾಲೇಜು ಶುಲ್ಕ ಕಟ್ಟಲಾಗದ ಬಡ ವಿದ್ಯಾರ್ಥಿಗೆ ಧನ ಸಹಾಯ ಮಾಡಿದ ​ಕೆಎಲ್​ ರಾಹುಲ್​

Last Updated : Jul 3, 2023, 2:58 PM IST

ABOUT THE AUTHOR

...view details