ಬಾಗಲಕೋಟೆ :ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾರ್ಚ್ 5ರಂದು ರಾಜ್ಯದ ಬಜೆಟ್ ಮಂಡನೆ ಮಾಡಲಿರುವ ಹಿನ್ನೆಲೆ, ಜಿಲ್ಲೆಯ ಜನತೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಮಾರ್ಚ್ 5ರಂದು ರಾಜ್ಯ ಬಜೆಟ್ ಮಂಡನೆ... ಬಾಗಲಕೋಟೆ ಜನರ ನಿರೀಕ್ಷೆ ಬೆಟ್ಟದಷ್ಟು - ಮಾರ್ಚ್ 5ರಂದು ರಾಜ್ಯ ಬಜೆಟ್
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾರ್ಚ್ 5ರಂದು ರಾಜ್ಯದ ಬಜೆಟ್ ಮಂಡನೆ ಮಾಡಲಿರುವ ಹಿನ್ನೆಲೆ, ಜಿಲ್ಲೆಯ ಜನತೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಪ್ರಮುಖವಾಗಿ ಆಲಮಟ್ಟಿ ಹಿನ್ನೀರಿನಿಂದ ಮುಳಗಡೆ ಆಗುವ ಪ್ರದೇಶಗಳಿಗೆ 60 ದಶಕಗಳಿಂದಲೂ ಶಾಶ್ವತ ಪರಿಹಾರ ಕಂಡಿಲ್ಲವಾಗಿದ್ದರೂ, ಮುಕ್ತಿ ಕಾಣಿಸಬೇಕಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಯೋಜನೆಗಳಿಗೆ ಹಣ ಮೀಸಲು ಸೇರಿದಂತೆ ಮೂರನೆ ಹಂತದ ಮುಳುಗಡೆಯಾಗುವ 22 ಗ್ರಾಮಗಳು ಹಾಗೂ ಒಂದು ಲಕ್ಷ ಎಕರೆ ಜಮೀನುಗಳಿಗೆ ಪರಿಹಾರ ಧನ ನೀಡಬೇಕಿರುವ ಬಗ್ಗೆ ಜನರ ನಿರೀಕ್ಷೆ ಸಾಕಷ್ಟಿದೆ.
ಆಲಮಟ್ಟಿ ಜಲಾಶಯದ ಆಣೆಕಟ್ಟಿನಲ್ಲಿ 525.256 ಮೀಟರ್ ನೀರು ಸಂಗ್ರಹಕ್ಕೆ ಚಾಲನೆ ನೀಡಿ, ಬಚಾವತ್ ಐತೀರ್ಪಿನಂತೆ ನೀರು ಬಳಕೆ ಮಾಡಿಕೊಂಡು, ರಾಯಚೂರು, ಕಲಬುರ್ಗಿ, ಯಾದಗಿರಿ,ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ನೀರಾವರಿಗೆ ಆದತ್ಯೆ ನೀಡುವ ಜೊತೆಗೆ, ನೇಕಾರರ ಸಮಸ್ಯೆ ಹಾಗೂ ಐತಿಹಾಸಿಕ ತಾಣಗಳ ಅಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ನೆರೆ ಸಂತ್ರಸ್ತರ ಅಭಿವೃದ್ಧಿಗಾಗಿ ಹಣ ಮೀಸಲು ಇಡಬೇಕಾಗಿದೆ. ಇನ್ನು ಈ ಬಗ್ಗೆ ನಮ್ಮ ಪ್ರತಿನಿಧಿ ಸಮಗ್ರ ಮಾಹಿತಿ ನೀಡಿದ್ದಾರೆ.