ಬಾಗಲಕೋಟೆ:ಸರ್ವಧರ್ಮ ಭಾವೈಕ್ಯತೆಯ ಸಂಕೇತದಿಂದ ಮುರನಾಳ ರಾಜೇಂದ್ರ ಮಠಕ್ಕೆ "ಜಗದ್ಗುರು" ಎಂಬ ಪದ ಬಂದಿದೆ ಎಂದು ವಿಶ್ವಕರ್ಮ ಜಗದ್ಗುರು ಪೀಠದ ಅರೆಮಾದನಹಳ್ಳಿಯ ವಿಶ್ವ ಬ್ರಾಹ್ಮಣ ಮಹಾಸಂಸ್ಥಾನ ಮಠದ ಅನಂತವಿಭೂಷಿತ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ ಹೇಳಿದರು.
ಹೊಸ ಮುರನಾಳ ಗ್ರಾಮದಲ್ಲಿ ನಡೆದ ಜಗದ್ಗುರು ಶ್ರೀ ಮಳೆರಾಜೇಂದ್ರಸ್ವಾಮಿ ಜಾತ್ರಾ ಮಹೋತ್ಸವದ ನಾಲ್ಕನೆಯ ದಿನದ ಉತ್ಸವದಲ್ಲಿ ಪಾಲ್ಗೊಂಡು ಸಾಧಕರಿಗೆ ಸನ್ಮಾನಿಸಿ ಆಶೀರ್ವಚನ ನೀಡಿದರು. ಈ ಭಾಗದ ಕೃಷಿಕರಿಗಾಗಿ ವಿಶ್ವವಿದ್ಯಾಲಯವಾಗಿ ಪರಿಗಣಿತವಾಗಿರುವ ಶ್ರೀಮಠ, ಬೆಳೆ ಬೆಳೆಯಲು ಬಿತ್ತನೆ ಬೀಜ ನೀಡುವುದರ ಜೊತೆಗೆ ಮುಂದಿನ ವರ್ಷದ ಮಳೆ ಸೂಚನೆ ನೀಡುತ್ತಾ ಬಂದಿರುವುದು ಇತಿಹಾಸವಾಗಿದೆ. ಶ್ರಮಿಕರಿಗೆ ಉತ್ತೆಜಿಸುವ ಕಾರ್ಯ ಶ್ರೀ ಮಠದ ಪರಂಪರೆಗೆ ಸಾಧನೆಯಾಗಿದೆ ಎಂದರು.