ಬಾಗಲಕೋಟೆ:ಬಾಳೆಹೂನ್ನೂರಿನ ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರು ಗುಣಮುಖರಾಗಲೆಂದು ನಗರದ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ನಗರ ಸಮೀಪದಲ್ಲಿರುವ ಜಾಗೃತ ದೇವಾಲಯ ವೀರಭದ್ರೇಶ್ವರ ಸ್ವಾಮಿಗೆ ಶ್ರೀಗಳು ಶೀಘ್ರ ಗುಣಮುಖರಾಗುವಂತೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ, ಪುನಸ್ಕಾರಗಳು ನೆರವೇರಿದವು.
ಕಸ್ತೂರಿಮಠದ ಪರಮ ಪೂಜ್ಯ ಕರಿಬಸವೇಶ್ವರ ಶಿವಯೋಗಿ ಸ್ವಾಮೀಜಿಯವರು, ಗುಳೇದಗುಡ್ಡ ಅಮರೇಶ್ವರ ಮಠದ ಷ.ಬ್ರ ನೀಲಕಂಠ ಶಿವಾಚಾರ್ಯ ಸ್ವಾಮೀಜಿಯವರು, ಮರಡಿಮಠದ ಅಭಿನವ ಷ.ಬ್ರ ಕಾಡಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ಸಾನಿಧ್ಯದಲ್ಲಿ ನೆರವೇರಿತು.
ಪೂಜಾ ಕಾರ್ಯಕ್ರಮದ ನೇತೃತ್ವವನ್ನು ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನದ ಪ್ರಧಾನ ಆರ್ಚಕರಾದ ಪ್ರಭುಸ್ವಾಮಿ ಸರಗಣಾಚಾರಿ ವಹಿಸಿದ್ದರು.
ಈ ಸಂದರ್ಭದಲ್ಲಿ ಸಿ.ಸಿ ಪಾಟೀಲ, ಸುರೇಶ ವಸ್ರ್ತದ, ಅಲ್ಲಯ್ಯ ಸರಗಣಾಚಾರಿ, ವೀರೇಶ ಹಿರೇಮಠ, ಮಹಾಂತೇಶ ಕೋಟಿ, ವ್ಹಿ. ಜಿ ಪಾಟೀಲ, ಪರಮಾನಂದ ಹಿರೇಮಠ, ಮಲ್ಲಯ್ಯ ಮುಪ್ಪಿನ್ನವರ, ಬಸವಾರದ ತುಂಬದಮಠ, ಸಿದ್ದು ಸರಗಣಾಚಾರಿ ಉಪಸ್ಥಿತರಿದ್ದರು.