ಬಾಗಲಕೋಟೆ: ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮೊಬೈಲ್ನಲ್ಲಿ ವಿಡಿಯೋ ಕಾಲ್ನಲ್ಲಿ ಮಾತನಾಡಲು ಹೋಗಿ, ಯೋಧನ ಪತ್ನಿಯೊಬ್ಬರು ಮೃತ ಪಟ್ಟಿರುವ ಘಟನೆ ಜಿಲ್ಲೆಯ ಮೂಗನೂರು ಗ್ರಾಮದಲ್ಲಿ ಜರುಗಿದೆ.
ಯೋಧ ಬೈಕ್ ನಡೆಸುತ್ತಿದ್ದರೆ, ಪತ್ನಿ ಮೊಬೈಲ್ನಲ್ಲಿ ವಿಡಿಯೋ ಕರೆಯಲ್ಲಿ ಮಗ್ನರಾಗಿದ್ದಾರೆ. ಈ ವೇಳೆ ರಸ್ತೆಯ ಹಂಪ್ಸ್ಗೆ ಮೇಲೆ ಬೈಕ್ ಏರಿದಾಗ ಯೋಧನ ಪತ್ನಿ ಪುಷ್ಪಲತಾ (35)ಆಯತಪ್ಪಿ ತಲೆ ಕೆಳಗಾಗಿ ಬಿದ್ದಿದ್ದಾರೆ. ತಲೆಗೆ ಗಂಭೀರ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪತ್ನಿಯನ್ನು ತವರು ಸೇರಿಸಿ ಸೇನೆಗೆ ಮರಳುವ ಆತುರದಲ್ಲಿದ್ದ ಯೋಧ, ಪ್ರೀತಿಯ ಪತ್ನಿಯ ಸಾವಿನಿಂದ ಕಣ್ಣೀರಿಟ್ಟು, ಗೋಳಾಡಿದ ಘಟನೆ ಎಂತಹವರ ಮನಸ್ಸನ್ನು ಕರಗಿಸುವಂತಿತ್ತು.