ಬಾಗಲಕೋಟೆ: ಜಿಲ್ಲೆಯಲ್ಲಿ ವಿದ್ಯುತ್ ಬೆಳಕನ್ನು ಕಾಣದೆ ಕತ್ತಲಿನಲ್ಲಿಯೇ ಜೀವನ ನಡೆಸುತ್ತಿದ್ದ ಸುಮಾರು 71 ಕುಟುಂಬಗಳಿಗೆ ರೋಟರಿ ಕ್ಲಬ್ ವತಿಯಿಂದ ಸೋಲಾರ್ ವಿದ್ಯುತ್ ದೀಪಗಳನ್ನು ವಿತರಿಸಲಾಯಿತು.
ಬಾಗಲಕೋಟೆ: ರೋಟರಿ ಕ್ಲಬ್ ವತಿಯಿಂದ ಸೋಲಾರ್ ದೀಪ ಕೊಡುಗೆ...! - Solar lamp distribution by Rotary Club in Bagalkot
ರೋಟರಿ ಸಂಸ್ಥೆಯು ಬಡ ಜನರಿಗೆ ಅನುಕೂಲ ಆಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದು ರೋಟರಿ ಕಬ್ಲ್ ನ ಮುಖಂಡರಾದ ಡಾ.ಗಿರೀಶ ಮಾಸೂರಕರ ತಿಳಿಸಿದರು.

ರೋಟರಿ ಕ್ಲಬ್ ವತಿಯಿಂದ ಸೋಲಾರ್ ದೀಪ ಕೊಡುಗೆ
ರೋಟರಿ ಕ್ಲಬ್ ವತಿಯಿಂದ ಸೋಲಾರ್ ದೀಪ ಕೊಡುಗೆ..
ಈ ವೇಳೆ ರೋಟರಿ ಕಬ್ಲ್ ನ ಮುಖಂಡರಾದ ಡಾ.ಗಿರೀಶ ಮಾಸೂರಕರ ಮಾತನಾಡಿ, ರೋಟರಿ ಸಂಸ್ಥೆಯು ಬಡ ಜನರಿಗೆ ಅನುಕೂಲ ಆಗುವಂತಹ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ. ಸ್ವಚ್ಛತೆ, ನೇತ್ರ ಚಿಕಿತ್ಸೆ, ಶಾಲಾ ಕಟ್ಟಡದ ಸುಧಾರಣೆ, ಶಾಲೆಯಲ್ಲಿ ಕಂಪ್ಯೂಟರ್ ವಿತರಣೆ ಸೇರಿದಂತೆ ಹಲವು ಸಾಮಾಜಿಕ ಕಾರ್ಯವನ್ನು ಹಮ್ಮಿಕೊಂಡು ಬಂದಿದೆ. ಈಗ ವಿದ್ಯುತ್ ಇಲ್ಲದ ಬಡವರಿಗೆ ಸೋಲಾರ್ ದೀಪ ನೀಡಿ, ಅವರ ಜೀವನದಲ್ಲಿ ಕತ್ತಲಿನಿಂದ ಬೆಳಕು ಮೂಡಿಸುವ ಕಾರ್ಯ ಮಾಡುತ್ತಿದೆ ಎಂದರು.
ಸಮಾರಂಭದಲ್ಲಿ ಭಾಗವಹಿಸಿದ್ದ ಶಾಸಕ ವೀರಣ್ಣ ಚರಂತಿಮಠ ವಿದ್ಯುತ್ ಸೋಲಾರ್ ದೀಪಗಳನ್ನು ವಿತರಣೆ ಮಾಡಿದರು.