ಕರ್ನಾಟಕ

karnataka

ETV Bharat / state

ಪಕ್ಷೇತರ ಅಭ್ಯರ್ಥಿಯಾಗಿ ನೇಕಾರ ಸಮುದಾಯದ ಸ್ವಾಮೀಜಿ ಶಿವಶಂಕರ ಶ್ರೀ ನಾಮಪತ್ರ ಸಲ್ಲಿಕೆ - Abbot Sivashankar Shri

ತೇರದಾಳ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನೇಕಾರ ಸಮುದಾಯದ ಸ್ವಾಮೀಜಿ ಶಿವಶಂಕರ ಶ್ರೀ ಇಂದು ತಹಶೀಲ್ದಾರ್ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ.

ಶಿವಶಂಕರ ಶ್ರೀ
ಶಿವಶಂಕರ ಶ್ರೀ

By

Published : Apr 19, 2023, 7:34 PM IST

ತೇರದಾಳ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶಿವಶಂಕರ ಶ್ರೀ ಅವರೊಂದಿಗೆ ಚಿಟ್​ಚಾಟ್​

ಬಾಗಲಕೋಟೆ :ರಾಜ್ಯ ರಾಜಕಾರಣದಲ್ಲಿ ಇದೇ ಮೊದಲ ಬಾರಿಗೆ ಸ್ವಾಮೀಜಿಯೊಬ್ಬರು ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ತೇರದಾಳ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಹಾಗೂ ನೇಕಾರರ ಸಮುದಾಯದ ಸ್ವಾಮೀಜಿ ಶಿವಶಂಕರ ಶ್ರೀಗಳು ಇಂದು(ಬುಧವಾರ) ಸಾಕಷ್ಟು ಜನರ ಬೆಂಬಲದೊಂದಿಗೆ ತಹಶೀಲ್ದಾರ್ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿ ಅಖಾಡಕ್ಕೆ ಇಳಿದಿದ್ದಾರೆ.

ಎರಡು ರಾಷ್ಟ್ರೀಯ ಪಕ್ಷಗಳು ನೇಕಾರರಿಗೆ ಮಾನ್ಯತೆ ನೀಡದ ಹಿನ್ನೆಲೆ ಸ್ವಾಮೀಜಿಯೇ ಪ್ರವೇಶ ಮಾಡಿದ್ದಾರೆ. ಸ್ಥಳೀಯರಿಗೆ ಅದರಲ್ಲಿಯೂ ನೇಕಾರರ ಮುಖಂಡರಿಗೆ ರಾಷ್ಟ್ರೀಯ ಪಕ್ಷಗಳಲ್ಲಿ ಟಿಕೆಟ್ ನೀಡುವಂತೆ ಬೆಂಬಲಿಗರು ಒತ್ತಾಯ ಮಾಡಿ, ಪ್ರತಿಭಟನೆಯನ್ನು ಸಹ ಮಾಡಿದ್ದರು. ಆದರೆ, ಟಿಕೆಟ್ ನೀಡದ ಹಿನ್ನೆಲೆ ಪಕ್ಷಾತೀತ ಹಾಗೂ ಜಾತ್ಯತೀತವಾಗಿ ನೇಕಾರರ ಮುಖಂಡರು ಸೇರಿಕೊಂಡು ಒಮ್ಮತದಿಂದ ಸ್ವಾಮೀಜಿ ಅವರಿಂದ ನಾಮಪತ್ರ ಸಲ್ಲಿಸಿದ್ದಾರೆ.

ತೇರದಾಳ ಮತಕ್ಷೇತ್ರದ ನೇಕಾರ ಸಮುದಾಯದ ಹೊಸುರು ಗ್ರಾಮದಲ್ಲಿರುವ ಮಠಾಧೀಶ ಶಿವಶಂಕರ ಶ್ರೀಗಳು ಮೂಲ ಹುಬ್ಬಳ್ಳಿ ಮಠದವರು ಆಗಿದ್ದು, ಕಳೆದ ಆರು ವರ್ಷಗಳಿಂದ ತೇರದಾಳ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಧಾರ್ಮಿಕ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ.

ಈ ಬಗ್ಗೆ ನಮ್ಮ ಈಟಿವಿ ಭಾರತ್ ಪ್ರತಿನಿಧಿ ಆನಂದ್​ ಅವರು ಶಿವಶಂಕರ ಶ್ರೀಗಳೊಂದಿಗೆ ಚಿಟ್​ಚಾಟ್​ ನಡೆಸಿದ್ದಾರೆ. ಈ ವೇಳೆ, ಮಾತನಾಡಿದ ಶ್ರೀಗಳು, ನಾನು ರಾಜಕೀಯಕ್ಕೆ ಬರಲು ಮುಖ್ಯ ಕಾರಣ ಎಂದರೆ ಎಲ್ಲಾ ಸಮುದಾಯ, ರೈತ ಸಮುದಾಯ, ಕೂಲಿ ಕಾರ್ಮಿಕರು, ನೇಕಾರರು, ದೀನ ದಲಿತರು ಹಾಗೂ ಧ್ವನಿ ಇಲ್ಲದವರಿಗೆ ನ್ಯಾಯ ಕೊಡಿಸುವ ಕಾರಣಕ್ಕಾಗಿ ಸಮಾಜ ಸೇವೆಯನ್ನು ರಾಜಕೀಯ ಮೂಲಕವೂ ಮಾಡುವ ಉದ್ದೇಶಕ್ಕಾಗಿ ನಾನು ರಾಜಕೀಯಕ್ಕೆ ಬರುವಂತಾಯಿತು ಎಂದರು.

ಶೋಷಿತರಿಗೆ ಧ್ವನಿ ನೀಡುವ ನಿಟ್ಟಿನಲ್ಲಿ ರಾಜಕೀಯ ಪ್ರವೇಶ: ತೇರದಾಳ ಮತಕ್ಷೇತ್ರದಲ್ಲಿ ಕಾಂಗ್ರೆಸ್​ ಹಾಗೂ ಬಿಜೆಪಿಯಲ್ಲಿ ಬಂಡಾಯ ತೀವ್ರಗೊಂಡಿದೆ. ಬಂಡಾಯದ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ’’ಬಂಡಾಯಗಾರರನ್ನು ಸೆಳೆದುಕೊಳ್ಳಬೇಕು ಅಥವಾ ನಾವು ಲಾಭ ಪಡೆದುಕೊಳ್ಳಬೇಕೆಂದು ನಾವು ಬಂದಿಲ್ಲ. ಶೋಷಿತರಿಗೆ ಧ್ವನಿಯನ್ನು ನೀಡುವ ನಿಟ್ಟಿನಲ್ಲಿ ನಾವು ಈ ಅವಕಾಶವನ್ನು ಬಳಸಿಕೊಳ್ಳುತ್ತೇವೆ‘‘ ಎಂದು ಹೇಳಿದರು. ರಾಷ್ಟ್ರೀಯ ಪಕ್ಷಗಳಿಂದ ನಮಗೆ ಟಿಕೆಟ್​ ನೀಡುವಂತೆ ಕೇಳಿಕೊಂಡಿದ್ದೆವು, ಆದರೆ. ಅವರು ನಮಗೆ ಒಂದು ಟಿಕೆಟ್ ಕೂಡಾ ಕೊಡಲಿಲ್ಲ. ಹೀಗಾಗಿ ನಮ್ಮ ನೇಕಾರ ಸಮುದಾಯದವರು, ಅಪಾರ ಬೆಂಬಲಿಗರು ನಮ್ಮನ್ನು ಚುನಾವಣೆಗೆ ನಿಲ್ಲುವಂತೆ ಪ್ರೇರೆಪಿಸಿದ್ದಾರೆ ಎಂದರು. ​

ರಾಜಕೀಯದ ಮೂಲಕ ಸೇವೆ ಮಾಡುವ ಉದ್ದೇಶ: ನೀವು ಯೋಗಿ ಆದಿತ್ಯನಾಥ್​ ಅವರ ರೀತಿ ಆಡಳಿತ ನಡೆಸಬೇಕು ಎಂದು ಚುನಾವಣೆಗೆ ಸ್ಪರ್ಧಿಸುತ್ತಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಶಿವಶಂಕರ್ ಸ್ವಾಮೀಜಿ, ನಾನು ನಾನಾಗಿಯೇ ಉಳಿಯುತ್ತೇನೆ. ಆದರೆ ರಾಜಕೀಯದ ಮೂಲಕ ಸೇವೆ ಮಾಡಲು ಉದ್ದೇಶಿಸಿದ್ದೇನೆ ಎಂದು ಹೇಳಿದರು. ಯಾರ ಮೇಲೂ ಪರಿಣಾಮ ಬೀರಲಿ ಎಂದು ನಾನು ಬಯಸಿಲ್ಲ, ನಾನು ನನ್ನಷ್ಟಕ್ಕೆ ಗೆಲ್ಲಬೇಕು, ಇದು ನನ್ನ ಮತದಾರರ ಗೆಲುವಾಗಬೇಕು ಎಂದು ಬಯಸಿದ್ದೇನೆ ಅಷ್ಟೇ ಎಂದು ಹೇಳಿದರು.

ಇದನ್ನೂ ಓದಿ:ವಿಜಯೇಂದ್ರರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಕೊಡಿ: ಯಡಿಯೂರಪ್ಪ

ABOUT THE AUTHOR

...view details