ಕರ್ನಾಟಕ

karnataka

ETV Bharat / state

ಬಾಗಲಕೋಟೆ ಅಂಬಾ ಭವಾನಿ ದೇವಾಲಯಕ್ಕೆ ಸಿದ್ದೇಶ್ವರ ಸ್ವಾಮೀಜಿ ಭೇಟಿ‌ - Siddheshwar Swamiji visits Bgalkot Amba Bhawani Temple

ಬಾಗಲಕೋಟೆ ನಗರದ ಅಂಬಾ ಭವಾನಿ ದೇವಾಲಯಕ್ಕೆ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಭೇಟಿ‌ ನೀಡಿ ದೇವಿಯ ದರ್ಶನ ಪಡೆದರು.

Siddheshwar Swamiji visits Amba Bhawani Temple
ಅಂಬಾ ಭವಾನಿ ದೇವಾಲಯಕ್ಕೆ ಸಿದ್ದೇಶ್ವರ ಸ್ವಾಮೀಜಿ ಭೇಟಿ‌

By

Published : Feb 10, 2020, 7:16 PM IST

ಬಾಗಲಕೋಟೆ : ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ನಗರದ ಅಂಬಾ ಭವಾನಿ ದೇವಾಲಯಕ್ಕೆ ಭೇಟಿ‌ ನೀಡಿ ದೇವಿಯ ದರ್ಶನ ಪಡೆದರು.

ಅಂಬಾ ಭವಾನಿ ದೇವಾಲಯಕ್ಕೆ ಸಿದ್ದೇಶ್ವರ ಸ್ವಾಮೀಜಿ ಭೇಟಿ‌

ನಗರದ ವಲ್ಲಭಾಭಾಯಿ ವೃತ್ತದ ಬಳಿರುವ ಎಸ್.ಎಸ್​.ಕೆ ಸಮಾಜದ ಅಂಬಾ ಭವಾನಿ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಸಮಾಜದ ಅಧ್ಯಕ್ಷ ಗಣಪತಿ ಸಾದಾನಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡೆ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಸಿದ್ದೇಶ್ವರ ಶ್ರೀ ಎಸ್​.ಎಸ್.ಕೆ ಸಮಾಜದ ಇತಿಹಾಸ, ಶೈಕ್ಷಣಿಕ ಮತ್ತು ಆರ್ಥಿಕ ಸಾಧನೆಗಳ ಬಗ್ಗೆ ನಾರಾಯಣಸಾ ಭಾಂಡೆಯಿಂದ ಮಾಹಿತಿ‌ ಪಡೆದರು. ಬಳಿಕ ಸ್ವಾಮೀಜಿಗೆ ದೇವಸ್ಥಾನದ ವತಿಯಿಂದ ಸನ್ಮಾನಿಸಲು ಮುಂದಾದರು. ಈ ವೇಳೆ ಸನ್ಮಾನ ನಿರಾಕರಿಸಿದ ಸ್ವಾಮೀಜಿ, ನಿಮ್ಮ ಸಮಾಜದ ಅಧ್ಯಕ್ಷರಿಗೆ ಸನ್ಮಾನ ಮಾಡಿ ಎಂದರು. ಅಲ್ಲದೆ ನಿಮ್ಮ ಸಮಾಜ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಆಶೀರ್ವಾದ ಮಾಡಿದರು.

For All Latest Updates

TAGGED:

ABOUT THE AUTHOR

...view details