ಕರ್ನಾಟಕ

karnataka

ETV Bharat / state

ಖಡಕ್​ ರೊಟ್ಟಿ, ಮೆಣಸಿನಕಾಯಿ ಚಟ್ನಿ ಶತಾಯುಷಿ ಸಿದ್ದವ್ವಜ್ಜಿ ಆರೋಗ್ಯದ ಸೀಕ್ರೆಟ್​!! - ಶತಾಯುಷಿ ಸಿದ್ದವ್ವ ಯಲ್ಲಪ್ಪ ಹೊಸಪೇಟೆ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ತೋಟದ ರಸ್ತೆಯಲ್ಲಿರುವ ಶತಾಯುಷಿ ಸಿದ್ದವ್ವ ಯಲ್ಲಪ್ಪ ಹೊಸಪೇಟೆ ಅವರು 110 ವರ್ಷ ಪೂರೈಸಿದ್ದು, ರೈತ ಸಮಾಜದ ಹಿರಿಯ ಸನ್ಮಾನ ಮಾಡಿ ಗೌರವಿಸಿದ್ದಾರೆ.

Siddavvajji has completed 110 years
ಸಿದ್ದವ್ವಜ್ಜಿಗೆ ರೈತ ಸಮಾಜದ ಹಿರಿಯರಿಂದ ಸನ್ಮಾನ

By

Published : Dec 3, 2020, 12:47 PM IST

ಬಾಗಲಕೋಟೆ: ಜಿಲ್ಲೆಯ ಬನಹಟ್ಟಿ ಪಟ್ಟಣದ ರೈತ ಸಮಾಜದ ಹಿರಿಯರು ನೂರಕ್ಕೂ ಹೆಚ್ಚು ವರ್ಷಗಳ ಕಾಲ ಬದುಕಿದ ಅಜ್ಜಿಯನ್ನು ಸನ್ಮಾನಿಸುವ ಮೂಲಕ ಎಲ್ಲರ ಗಮನ ಸೆಳೆದರು.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ತೋಟದ ರಸ್ತೆಯಲ್ಲಿರುವ ಶತಾಯುಷಿ ಸಿದ್ದವ್ವ ಯಲ್ಲಪ್ಪ ಹೊಸಪೇಟೆ (ಕೋಲೂರ) ಅವರಿಗೆ 110 ವರ್ಷ ವಯಸ್ಸಾಗಿದ್ದು, ಮೂಲತಃ ಮಹಾಲಿಂಗಪುರ ಸಮೀಪದ ಬೆಳಗಲಿ ಗ್ರಾಮದವರು. ಈಗಲೂ ಸಹ ಬೆಳಗಿನ ಜಾವ 4 ಗಂಟೆಗೆ ಎದ್ದೇಳುವ ರೂಢಿ ಮಾಡಿಕೊಂಡಿರುವ ಇವರು, ಎಲ್ಲರಿಗೂ ಬದುಕಿನಲ್ಲಿ ಶಿಸ್ತಿನ ಶಿಕ್ಷಣವನ್ನು ಕಲಿಸುತ್ತಿದ್ದಾರೆ. ಹೊಲ, ಗದ್ದೆ ಕೆಲಸದಲ್ಲಿ ನಿರತವಾಗಿರುತ್ತಿದ್ದ ಸಿದ್ದವ್ವಜ್ಜಿ ಕಳೆದ 10 ವರ್ಷಗಳಿಂದ ಮನೆಗೆಲಸದಲ್ಲಿ ಮಾತ್ರ ತೊಡಗಿಸಿಕೊಂಡಿದ್ದಾರೆ.

ಸಿದ್ದವ್ವಜ್ಜಿಗೆ ರೈತ ಸಮಾಜದ ಹಿರಿಯರಿಂದ ಸನ್ಮಾನ

ಸಿದ್ದವ್ವಜ್ಜಿಗೆ ಖಡಕ್ ರೊಟ್ಟಿ, ಮೆಣಸಿನಕಾಯಿ ಚಟ್ನಿ ಆಂದ್ರೆ ಬಲು ಇಷ್ಟ. ಒಂದೆರಡು ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ಬಿಟ್ಟರೆ ಮಧುಮೇಹ, ರಕ್ತದೊತ್ತಡಗಳಂತಹ ಯಾವುದೇ ರೋಗಗಳು ಅಜ್ಜಿಯತ್ತಾ ಸುಳಿದಿಲ್ಲ. ಸ್ವಾತಂತ್ರ್ಯ ಪೂರ್ವದ ಹಳೆಯ ನೆನಪುಗಳನ್ನು ಎಳೆ ಎಳೆಯಾಗಿ ಹೇಳುವ ಜೊತೆಗೆ ಅಂದಿನ ಮಹಿಳಾ ಸಾಧಕಿಯರು ಎಲೆಮರೆಯ ಕಾಯಿಯಂತೆ ಹೋರಾಟ ನಡೆಸಿರುವ ಕುರಿತು ಮಾಹಿತಿ ನೀಡಿದ್ದಾರೆ.

ಇನ್ನು ಶತಾಯುಷಿ ಸಿದ್ದವ್ವಜ್ಜಿಯ ಸೋದರ ಸಂಬಂಧಿಯಾದ ಬಸಪ್ಪ ಸಿದಕಡಿ (101) ಅವರು ಕಳೆದ ವರ್ಷ 100 ವರ್ಷವನ್ನು ಪೂರೈಸಿದ್ದು, ನಾನು ಚಿಕ್ಕವನಿದ್ದಾಗ ಅಕ್ಕನ ಜೊತೆ ಆಟಮಾಡುತ್ತಿದೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಅಜ್ಜಿಯ ಸಾಧನೆಯನ್ನು ಗುರುತಿಸಿ ರೈತ ಸಮಾಜದ ಹಿರಿಯರು ಸಿದ್ದವ್ವಜ್ಜಿಗೆ ಸನ್ಮಾನ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ABOUT THE AUTHOR

...view details