ಕರ್ನಾಟಕ

karnataka

ETV Bharat / state

ಪ್ರಶಸ್ತಿಯನ್ನು ಯೋಧನ ಕುಟುಂಬಕ್ಕೆ ನೀಡಿ ಸಾರ್ಥಕತೆ ಮೆರೆದ ಗಾಯಕಿ - ಚಲನಚಿತ್ರೋತ್ಸವ ಸಮಾರಂಭ

ಸಿದ್ದನಕೊಳ್ಳದಲ್ಲಿ ಜಾತ್ರಾ ಮಹೋತ್ಸವ ನಿಮಿತ್ತ ಸಿದ್ದಶ್ರೀ ಪ್ರಶಸ್ತಿ ಪ್ರದಾನ ಹಾಗೂ ಚಲನಚಿತ್ರೋತ್ಸವ ಸಮಾರಂಭವು ಅದ್ಧೂರಿಯಾಗಿ ಜರುಗಿತು. ಈ ವೇಳೆ ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕಿ ಮಧುಶ್ರೀ ಅವರಿಗೆ ನೀಡಿದ ಪ್ರಶಸ್ತಿಯನ್ನು ಇತ್ತೀಚೆಗೆ ವೀರ ಮರಣ ಹೊಂದಿರುವ ಗದಗ ಜಿಲ್ಲೆಯ ರೋಣ ತಾಲೂಕಿನ ಅಸುಂಡಿ ಗ್ರಾಮದ ವಿರೇಶ ಕುರಹಟ್ಟಿ ಯೋಧನ ಕುಟುಂಬದವರಿಗೆ ನೀಡುವ ಮೂಲಕ ಸಾರ್ಥಕತೆ ಮೆರೆದರು.

Siddashree award ceremony and film festival in Bagalkot
ತನಗೆ ಸಿಕ್ಕ ಪ್ರಶಸ್ತಿಯನ್ನು ವಿರೇಶ ಕುರಹಟ್ಟಿ ಯೋಧನ ಕುಟುಂಬಕ್ಕೆ ನೀಡಿ ಸಾರ್ಥಕತೆ ಮೆರೆದ ಹಿನ್ನೆಲೆ ಗಾಯಕಿ ಮಧುಶ್ರೀ

By

Published : Jan 15, 2020, 2:54 PM IST

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಸುಕ್ಷೇತ್ರ ಸಿದ್ದನಕೊಳ್ಳದಲ್ಲಿ ಜಾತ್ರಾ ಮಹೋತ್ಸವದ ನಿಮಿತ್ತ ಸಿದ್ದಶ್ರೀ ಪ್ರಶಸ್ತಿ ಪ್ರದಾನ ಹಾಗೂ ಚಲನಚಿತ್ರೋತ್ಸವ ಸಮಾರಂಭವು ಅದ್ಧೂರಿಯಾಗಿ ಜರುಗಿತು.

ಡಾ.ಶಿವಕುಮಾರ ಸ್ವಾಮಿಗಳ ನೇತೃತ್ವದಲ್ಲಿ ನಡೆಯುವ ಸಿದ್ದಶ್ರೀ ಪ್ರಶಸ್ತಿಯನ್ನು ಈ ಬಾರಿ ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕಿ ಮಧುಶ್ರೀ ಅವರಿಗೆ ನೀಡಿ ಗೌರವಿಸಲಾಯಿತು. ಬಾಹುಬಲಿ ಹಾಗೂ ಶಿವಾಜಿ ಚಲನಚಿತ್ರದ ಹಿನ್ನೆಲೆ ಗಾಯಕಿಯಾಗಿದ್ದ ಮಧುಶ್ರೀ ಅವರಿಗೆ ಸಿದ್ದನಕೊಳ್ಳ ಮಠದಿಂದ ನೀಡುವ ಸಿದ್ದಶ್ರೀ ಪ್ರಶಸ್ತಿ ಫಲಕ ಹಾಗೂ 25 ಸಾವಿರ ನಗದು ಹಣವನ್ನು ನೀಡಿ ಸನ್ಮಾನಿಸಲಾಯಿತು.

ತನಗೆ ಸಿಕ್ಕ ಪ್ರಶಸ್ತಿಯನ್ನು ವಿರೇಶ ಕುರಹಟ್ಟಿ ಯೋಧನ ಕುಟುಂಬಕ್ಕೆ ನೀಡಿ ಸಾರ್ಥಕತೆ ಮೆರೆದ ಹಿನ್ನೆಲೆ ಗಾಯಕಿ ಮಧುಶ್ರೀ

ಪ್ರಶಸ್ತಿ ಸ್ವೀಕಾರ ಮಾಡಿದ ನಂತರ ಮಾತನಾಡಿದ ಮಧುಶ್ರೀ, ದೇಶ ಕಾಯುವ ಯೋಧರು ನಿಜವಾದ ಹೀರೋ. ಅವರು ಕಷ್ಟಪಟ್ಟು ಕೆಲಸ ಮಾಡಿರುವುದಕ್ಕೆ ನಾವು ನೆಮ್ಮದಿಯಿಂದ ಜೀವನ ಸಾಗಿಸುವಂತಾಗಿದೆ. ಆದ್ದರಿಂದ ಪ್ರಶಸ್ತಿಯ ಜೊತೆಗೆ ಬಂದಿರುವ ನಗದು ಹಣವನ್ನು ದೇಶಕ್ಕಾಗಿ ವೀರ ಮರಣ ಹೊಂದಿರುವ ಯೋಧ ಕುಟುಂಬದಕ್ಕೆ ನೀಡಿವುದಾಗಿ ತಿಳಿಸಿದರು. ಇತ್ತೀಚೆಗೆ ವೀರ ಮರಣ ಹೊಂದಿರುವ ಗದಗ ಜಿಲ್ಲೆಯ ರೋಣ ತಾಲೂಕಿನ ಅಸುಂಡಿ ಗ್ರಾಮದ ವೀರೇಶ ಕುರಹಟ್ಟಿ ಯೋಧನ ಕುಟುಂಬದವರನ್ನು ಕರೆಸಿ, ಸನ್ಮಾನ ಮಾಡಿ, 25 ಸಾವಿರ ನಗದು ಹಣ ನೀಡುವ ಮೂಲಕ ಹಿನ್ನೆಲೆ ಗಾಯಕಿ ಮಧುಶ್ರೀ ಸಾರ್ಥಕತೆ ಮೆರೆದರು.

ಇದೇ ಸಮಯದಲ್ಲಿ ಸಿದ್ದನಕೊಳ್ಳ ಸಿದ್ದಪ್ಪಜ್ಜ ಶ್ರೀಗಳ ಕುರಿತು ರಚನೆ ಮಾಡಿದ ಗಾಯನವನ್ನು ಹೇಳಿ ಗಮನ ಸೆಳೆದರು. ಇದೇ ವೇದಿಕೆಯಲ್ಲಿ ಬ್ರಹ್ಮಪುತ್ರ ಚಲನಚಿತ್ರದ ಟೀಜರ್ ರಿಲೀಸ್​ ಮಾಡಿದರು ಹಾಗೂ ನೂತನ ಚಲನಚಿತ್ರ ತಾತ್ಪರ್ಯ ಎಂಬ ಚಲನಚಿತ್ರಕ್ಕೆ ಡಾ.ಶಿವಕುಮಾರ ಸ್ವಾಮೀಜಿಗಳು, ಕ್ಯಾಮರಾ ಚಾಲನೆ ಮಾಡಿ ಶುಭಾರಂಭ ನೀಡಿದರು. ಸಮಾರಂಭ ಅಂಗವಾಗಿ ಜಾಧೋ ಸೇರಿದಂತೆ ವಿವಿಧ ಸಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು ಪ್ರೇಕ್ಷಕರ ಮನ ಸೆಳೆದರು.

ABOUT THE AUTHOR

...view details