ಕರ್ನಾಟಕ

karnataka

ETV Bharat / state

ಹೈಕಮಾಂಡ್ ಎಲ್ಲಿ ನಿಲ್ಲಬೇಕು ಎಂದು ಸೂಚಿಸುತ್ತದೆಯೋ ಅಲ್ಲಿ ನಿಲ್ಲುತ್ತೇನೆ: ಸಿದ್ದರಾಮಯ್ಯ - etv bharat kannada

ಸಚಿವ ಸಿಸಿ ಪಾಟೀಲರ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು -ಸಾಮಾನ್ಯವಾಗಿ ದುಡ್ಡು ಯಾರಿಗೆ ತಂದು ಕೊಡ್ತಾರೆ - ಸರ್ಕಾರದಲ್ಲಿ ಇರೋರಿಗೆ ತಾನೇ ಎಂದು ಸಿದ್ದರಾಮಯ್ಯ ವ್ಯಂಗ್ಯ

Siddaramaiah
ಸಿದ್ದರಾಮಯ್ಯ

By

Published : Jan 6, 2023, 11:03 PM IST

ಬಾಗಲಕೋಟೆ: ಎಲೆಕ್ಷನ್ ಇನ್ನೂ ಮೂರು ತಿಂಗಳಿದೆ, ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಬಾದಾಮಿ ಪಟ್ಟಣಕ್ಕೆ ಆಗಮಿಸಿದ ಅವರು ವಸತಿ ಯೋಜನೆ ಅಡಿ ಹಕ್ಜು ಪತ್ರ ವಿತರಣೆ ಸಮಾರಂಭದಲ್ಲಿ ಮಾತನಾಡಿ ವಿಧಾನಸೌಧದಲ್ಲಿ 10 ಲಕ್ಷ ರೂ ಪತ್ತೆ ವಿಚಾರವಾಗಿ ಲೋಕೋಪಯೋಗಿ ಇಲಾಖೆ ಸಚಿವ ಸಿಸಿ ಪಾಟೀಲರ ಹೇಳಿಕೆಗೆ ತಿರುಗೇಟು ನೀಡಿದರು.

ಹಣ ಸಿದ್ದರಾಮಯ್ಯಗೆ ಹೋಗಿದೆ ಎಂದು ನಾವು ಹೇಳಬಹುದ ಎಂದಿದ್ದ ಸಚಿವ ಸಿಸಿ ಪಾಟೀಲರಿಗೆ ತಿರುಗೇಟು ನೀಡಿ, ನಾವು ಸರ್ಕಾರದಲ್ಲಿ ಇದ್ದೇವಾ? ಇಂಜನಿಯರ್ ನನಗೆ ತಂದು ಕೊಟ್ಟಿದ್ದಾನಾ ಎಂದು ಪ್ರಶ್ನೆ ಮಾಡಿದರು, ಸಾಮಾನ್ಯವಾಗಿ ದುಡ್ಡು ಯಾರಿಗೆ ತಂದು ಕೊಡ್ತಾರೆ. ಸರ್ಕಾರದಲ್ಲಿ ಇರೋರಿಗೆ ತಾನೇ ಎಂದು ಸಿದ್ದರಾಮಯ್ಯನವರು ವ್ಯಂಗ್ಯವಾಡಿದರು.ಈ ವೇಳೆ ಬಾದಾಮಿಯಲ್ಲೇ ನಿಲ್ಲಿ ಎಂದು ಅಭಿಮಾನಿಗಳ ಕರೆಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಕೋಲಾರ, ಬಾದಾಮಿ, ಮತ್ತು ವರುಣಾ ಕ್ಷೇತ್ರದಲ್ಲಿ ನಿಲ್ಲಬೇಕು ಎಂದು ಒತ್ತಡ ಇದೆ. ಅದಕ್ಕೆ ಮೂರು ಕ್ಷೇತ್ರಗಳಿಗೂ ಅರ್ಜಿ ಹಾಕುತ್ತೇನೆ. ಹೈಕಮಾಂಡ್ ಎಲ್ಲಿ ನಿಲ್ಲಬೇಕು ಎಂದು ಸೂಚಿಸುತ್ತದೆಯೋ ಅಲ್ಲಿ ನಿಲ್ಲುತ್ತೇನೆ ಎಂದು ಹೇಳಿದರು.

ಬನಶಂಕರಿ ಜಾತ್ರೆ ಕುರಿತು ಮಾತನಾಡಿ, ಜಾತ್ರೆ ಪ್ರತಿ ವರ್ಷ ನಡೆಯುತ್ತೆ, ವಿಶೇಷ ಎಂದರೆ ಎರಡು ವರ್ಷ ಕೋವಿಡ್ ನಿಂದಾಗಿ ಜಾತ್ರೆ ನಡೆದಿರಲಿಲ್ಲ. ಈ ವರ್ಷ ಜಾತ್ರೆ ಚನ್ನಾಗಿ ನಡೆಯುತ್ತಿದೆ. ಜಾತ್ರೆಯ ಬಗ್ಗೆ ನಾನು ತಾಲೂಕು ಆಡಳಿತ ಹಾಗೂ ಜಿಲ್ಲಾಧಿಕಾರಿ ಜೊತೆ ಸಭೆ ನಡೆಸಿದ್ದೆ. ಎಲ್ಲ ಸೌಲಭ್ಯಗಳನ್ನು ಮಾಡಿದ್ದಾರೆ ರಥೋತ್ಸವ ನಡೆಯುತ್ತದೆ ನಾನು ಭಾಗವಹಿಸಲೆಂದು ಬಂದಿದ್ದೇನೆ ಎಂದರು. ಈ ವೇಳೆ ಬನಶಂಕರಿ ತಾಯಿ ರಾಜ್ಯದ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದರು.

ಬಾದಾಮಿಯಲ್ಲಿ ಚಾಲುಕ್ಯ ಪ್ರತಿಮೆ ಆಗಬೇಕಿತ್ತು. ಇನ್ನೂ ಆಗಿರಲಿಲ್ಲ ಈಗ ಆಗುತ್ತಿದೆ ಎಂದು ತಿಳಿಸಿದರು. ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ನಮ್ಮ ಕ್ಲಿನಿಕ್ ಅಲ್ಲ, ನಮ್ಮ ಆಸ್ಪತ್ರೆ ಅದು, ಕ್ಲಿನಿಕ್‌ ಇಂಗ್ಲಿಷ್ ಪದ, ಆಸ್ಪತ್ರೆ ಕನ್ನಡ ಪದ ಎಂದರು. ಚುನಾವಣೆ ಗಿಮಿಕ್​ಗಾಗಿ ನಮ್ಮ ಕ್ಲಿನಿಕ್ ಮಾಡಿದ್ದಾರೆ ಎಂದು ಟೀಕಿಸಿದರು. ವಸತಿ ಯೋಜನೆಗೆ ನರೇಗಾ ಹಣ ಸೇರಿಸಿ, ಒಟ್ಟು 1ಲಕ್ಷದ 8 ಸಾವಿರ ಕೊಟ್ಟಿದ್ದೇವೆ. 1200 ಜನರಿಗೆ ಮನೆಗಳನ್ನ ಕೊಡಿಸುವ ಕೆಲಸ ಮಾಡಿದ್ದೇನೆ. ಈ ಸರ್ಕಾರ ಬಂದ ಮೇಲೆ ಇವರು ಒಂದು ಗ್ರಾಮ ಪಂಚಾಯಿತಿಗೆ 20-30 ಮನೆಗಳನ್ನ ಕೊಟ್ಟಿದ್ದಾರೆ. ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ, ಬಂದಮೇಲೆ ಯಾರ್ಯಾರಿಗೆ ಮನೆ ಇಲ್ಲ ಅವರಿಗೆಲ್ಲ ಮನೆ ಕೊಡ್ತೇವೆ ಎಂದು ಆಶ್ವಾಸನೆ ನೀಡಿದರು.

ಇನ್ನೂ ಮೂರು ತಿಂಗಳಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ. ಇಲ್ಲಿಯ ಆಸ್ಪತ್ರೆಯಲ್ಲಿ ಡಾಕ್ಟರ್ ಇಲ್ಲ, ಖಾಲಿ ಇರುವ ಹುದ್ದೆ ಭರ್ತಿ ಮಾಡಿ ಎಂದು ಆರೋಗ್ಯ ಸಚಿವರಿಗೆ ಹೇಳಿದೆ. ಆದರೆ ಮಾಡಲಿಲ್ಲ. ಇದು ಚುನಾವಣೆ ಗಿಮಿಕ್ ಎಂದು ಸಿದ್ದರಾಮಯ್ಯ ತಿಳಿಸಿದರು.

ಇದನ್ನೂ ಓದಿ:ಸುಳ್ಳು ಕಾಂಗ್ರೆಸ್ ಪಕ್ಷದ ಮನೆ ದೇವರು.. ನಿತ್ಯ ಸುಳ್ಳು ಹೇಳುವ ಕಾಯಕ ಸಿದ್ದರಾಮಯ್ಯ ಅವರದ್ದು: ಸಿಟಿ ರವಿ ವಾಗ್ದಾಳಿ

ABOUT THE AUTHOR

...view details