ಕರ್ನಾಟಕ

karnataka

ETV Bharat / state

ಸ್ವಕ್ಷೇತ್ರಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ, ಸೂಕ್ತ ವ್ಯವಸ್ಥೆ ಮಾಡಲು ಸ್ಥಳದಲ್ಲೇ ತಹಸೀಲ್ದಾರ್​​ಗೆ ಸೂಚನೆ - ಬಾದಾಮಿಗೆ ಸಿದ್ದರಾಮಯ್ಯ ಭೇಟಿ

ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಮಲ್ಲಪ್ರಭಾ ನದಿಯಿಂದ ಪ್ರವಾಹ ಉಂಟಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಿಹಾರದ ಬಗ್ಗೆ ಸಂತ್ರಸ್ತರೊಡನೆ  ಚರ್ಚೆ ನಡೆಸಿದ್ದಾರೆ.

ಸಿದ್ದರಾಮಯ್ಯ

By

Published : Oct 22, 2019, 10:30 PM IST

ಬಾಗಲಕೋಟೆ :ಜಿಲ್ಲೆಯ ಬಾದಾಮಿ ಮತಕ್ಷೇತ್ರದಲ್ಲಿ ಪ್ರವಾಸ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಮಳೆ ಸ್ವಾಗತ ನೀಡಿದ ಹಿನ್ನೆಲೆಯಲ್ಲಿ ಮಳೆಯಲ್ಲಿಯೇ ಸಂತ್ರಸ್ತರ ಸಮಸ್ಯೆ ಆಲಿಸಿದರು.

ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಿದ್ದು ಭೇಟಿ

ಮಳೆಯಿಂದಾಗಿ ಸಂತ್ರಸ್ತರು ಮಾಹಿತಿ ನೀಡುವುದಕ್ಕೆ ಗೊಂದಲಮಯ ಉಂಟಾದ ಕಾರಣ ಸಿದ್ದರಾಮಯ್ಯ ಅವರು ಸಿಡಿಮಿಡಿಗೊಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಬಾದಾಮಿ ತಾಲೂಕಿನ ಕರ್ಲಕೊಪ್ಪ ಗ್ರಾಮದಲ್ಲಿ ನಡೆದಿದೆ.

ಮಲ್ಲಪ್ರಭಾ ನದಿಯಿಂದ ಪ್ರವಾಹ ಉಂಟಾಗಿದ್ದ ಕರ್ಲಕೊಪ್ಪ ಗ್ರಾಮಕ್ಕೆ ಮಧ್ಯಾಹ್ನ 12 ಗಂಟೆಗೆ ಸಿದ್ದು ಬರಬೇಕಾಗಿತ್ತು. ಆದರೆ, ಕೊಣ್ಣೂರು ಹಾಗೂ ಚೊಳಚ್ಚಗುಡ್ಡ ಸೇತುವೆ ಮುಗಳಡೆ ಆದ ಹಿನ್ನೆಲೆ, ಬೆಳಗಾವಿಯ ಯರಗಟ್ಟಿ ಮಾರ್ಗವಾಗಿ, ಬಾಗಲಕೋಟೆ ಜಿಲ್ಲೆಯ ಲೋಕಾಪುರ, ಗದ್ದನಕೇರಿ ಕ್ರಾಸ್, ಕೆರೂರ ಮಾರ್ಗವಾಗಿ ಕುಳಗೇರಿ ತಲುಪಿದ ಅವರು ಕರ್ಲಕೊಪ್ಪ ಗ್ರಾಮಕ್ಕೆ ಸುಮಾರು 4 ಗಂಟೆಗೆ ತಲುಪಿದ್ದಾರೆ.

ಈ ಸಮಯದಲ್ಲಿ ಪರಿಹಾರ ಬಗ್ಗೆ ಸಂತ್ರಸ್ತರೊಡನೆ ಚರ್ಚೆ ನಡೆಸಿ, ಸಂತ್ರಸ್ತರಿಗೆ ಹತ್ತು ಸಾವಿರ ಪರಿಹಾರ ಧನ ಹಾಗೂ ಮನೆಯಲ್ಲಿ ಪ್ರತೇಕ ಆಧಾರ ಕಾರ್ಡ್​, ರೇಷನ್ ಕಾರ್ಡ್ ಇದ್ದಲ್ಲಿ ಅವರಿಗೂ ಪರಿಹಾರ ಧನ ಕೊಡಬೇಕು ಎಂದು ಪಿಡಿಒ ಹಾಗೂ ಉಪವಿಭಾಗಾಧಿಕಾರಿ ಗಂಗಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.

ABOUT THE AUTHOR

...view details