ಬಾಗಲಕೋಟೆ: ಕೆ ಎಸ್ ಈಶ್ವರಪ್ಪ ಪೆದ್ದ, ಅವನಿಗೆ ಏನೂ ಗೊತ್ತಿಲ್ಲ. ಆತನ ಬಗ್ಗೆ ನಾನು ಮಾತನಾಡಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು. ನೆಹರೂ 11 ವರ್ಷ ಜೈಲಿಗೆ ಹೋಗಿದ್ರು ಅದು ಈಶ್ವರಪ್ಪಗೆ ಗೊತ್ತಾ?. ಇವರಲ್ಲಿ ಯಾರು ಜೈಲಿಗೆ ಹೋಗಿದ್ದಾರೆ?. ನೆಹರೂ ಬಗ್ಗೆ ಲಘುವಾಗಿ ಮಾತನಾಡೋದು ಸರಿಯಲ್ಲ. ಇವರಿಗೆ ಇತಿಹಾಸವೇ ಗೊತ್ತಿಲ್ಲ ಎಂದರು.
ಈಶ್ವರಪ್ಪ ಪೆದ್ದ, ಅವನಿಗೆ ಏನೂ ಗೊತ್ತಿಲ್ಲ: ಸಿದ್ದರಾಮಯ್ಯ - ಈಶ್ವರಪ್ಪ
ಕೆ ಎಸ್ ಈಶ್ವರಪ್ಪ ಹೇಳಿಕೆಗೆ ಸಿದ್ದರಾಮಯ್ಯ ತೀಕ್ಷ್ಣ ಪ್ರತಿಕ್ರಿಯೆ ನೀಡಿ, ಅವನೊಬ್ಬ ಪೆದ್ದ ಎಂದು ಹರಿಹಾಯ್ದರು.
ಈಶ್ವರಪ್ಪ ಪೆದ್ದ,ಅವನಿಗೆ ಏನು ಗೊತ್ತಿಲ್ಲ : ಸಿದ್ದರಾಮಯ್ಯ
ಅಮೃತ ಮಹೋತ್ಸಕ್ಕೆ ತೆರಳುತ್ತಿದ್ದ ಸಮಯದಲ್ಲಿ ವಾಹನ ಅಪಘಾತವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಸಿದ್ದರಾಮಯ್ಯ, ಆರೋಗ್ಯ ವಿಚಾರಿಸಿದರು. ಇದೇ ಸಂದರ್ಭದಲ್ಲಿ ಗಾಯಗೊಂಡವರಿಗೆ 50 ಸಾವಿರ ರೂ, ಗಂಭೀರವಾಗಿ ಗಾಯಗೊಂಡಿವರಿಗೆ ಒಂದು ಲಕ್ಷ ರೂ ಪರಿಹಾರ ಧನ ವಿತರಿಸಿದರು.
ಇದನ್ನೂ ಓದಿ: ನೀವು ಪೊಲೀಸ್ ಎಂದ ವಿದ್ಯಾರ್ಥಿಗಳು.. ತಬ್ಬಿಬ್ಬಾದ್ರು ಸಚಿವ ಉಮೇಶ್ ಕತ್ತಿ