ಕರ್ನಾಟಕ

karnataka

ETV Bharat / state

ಮಾಂಸ ತಿನ್ನುವುದು, ತಿನ್ನದೇ ಇರುವುದು ವಿವಾದವೇ ಅಲ್ಲ: ಸಿದ್ದರಾಮಯ್ಯ - ಮಾಂಸ ತಿಂದು ದೇವಸ್ಥಾನಕ್ಕೆ ಭೇಟಿ

ರಾಜ್ಯ ಬಿಜೆಪಿ ನಾಯಕರಿಗೆ ಜನರಿಗೆ ಮುಖ ತೋರಿಸುವ ಶಕ್ತಿ ಇಲ್ಲ, ಅದಕ್ಕಾಗಿಯೇ ಮೇಲಿಂದ ಮೇಲೆ ರಾಜ್ಯಕ್ಕೆ ಕೆಂದ್ರ ನಾಯಕರನ್ನು ಕರೆ ತರುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯ
ಸಿದ್ದರಾಮಯ್ಯ

By

Published : Feb 22, 2023, 5:53 PM IST

ಸಿದ್ದರಾಮಯ್ಯ ಪ್ರತಿಕ್ರಿಯೆ

ಬಾಗಲಕೋಟೆ: ದೇವಸ್ಥಾನಕ್ಕೆ ಹೋಗುವುದು, ಹೋಗದೇ ಇರುವುದು, ಮಾಂಸ ತಿನ್ನುವುದು, ತಿನ್ನದೇ ಇರುವುದು ವಿವಾದವೇ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇಲ್ಲಿಯ ಹುನಗುಂದ ಮತಕ್ಷೇತ್ರದಲ್ಲಿ ಕಾಂಗ್ರೆಸ್​ ಪ್ರಜಾಧ್ವನಿ ಯಾತ್ರೆ ನಿಮಿತ್ತ ಆಗಮಿಸಿದ ಸಂದರ್ಭದಲ್ಲಿ, ಇತ್ತೀಚೆಗೆ ಉತ್ತರ ಕನ್ನಡಕ್ಕೆ ತೆರಳಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮಾಂಸ ತಿಂದು ದೇವಸ್ಥಾನಕ್ಕೆ ತೆರಳಿರುವ ಆರೋಪ ಕೇಳಿ ಬಂದಿದ್ದು, ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರ ಜೊತೆ ಬಾಡೂಟ ಸೇವಿಸಿ ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೋ ವೈರಲ್ ಆಗಿದ್ದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.

ಇಲ್ಲಿ ನಾಡಿನ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕಾಗಿದೆ. ನಾನು ಈಗಾಗಲೇ ಬಿಜೆಪಿಗರೊಂದಿಗೆ ಚರ್ಚೆ ಮಾಡಲು ತಯಾರಿದ್ದೇವೆ. ನೀವು ತಯಾರಿದ್ದೀರಾ ಎಂದು ಕೇಳಿದ್ದೇನೆ. ಈ ನಾಡಿನ ರೈತರಿಗೆ, ಬಡವರಿಗೆ ಏನು ಮಾಡಿದ್ದೀರಿ ಅಂತ ಅವರು ಹೇಳಬೇಕು ಎಂದು ಬಿಜಲಪಿ ನಾಯಕರಿಗೆ ಪ್ರಶ್ನೆ ಮಾಡಿದರು. ಜನರ ಸಮಸ್ಯೆಗಳನ್ನು ಬಗೆಹರಿಸುವದನ್ನು ಬಿಟ್ಟು ನಾಮ(ತಿಲಕ) ಹಾಕಿಕೊಳ್ಳುವದು, ದೇವಸ್ಥಾನಕ್ಕೆ ಹೋಗುವದು, ಟಿಪ್ಪು ಸುಲ್ತಾನ, ಗಾಂಧಿ, ಗೋಡ್ಸೆ, ಸಾವರ್ಕಕರ್ ಬಗ್ಗೆ ಮಾತನಾಡುವುದು ಇವೆಲ್ಲ ರಿಲೆವೆಂಟ್ ವಿಷಯಗಳಲ್ಲ. ಬಿಜೆಪಿಗರಿಗೆ ಸ್ಪಷ್ಟವಾದ ವಿಚಾರಧಾರೆ ಇಲ್ಲ ಎಂದು ಸಿದ್ದರಾಮಯ್ಯನವರು ಹರಿಹಾಯ್ದರು.

ಮೋದಿ ವಿರುದ್ದ ಸಿದ್ದರಾಮಯ್ಯ ವಾಗ್ದಾಳಿ: ಇದೇ ಸಮಯದಲ್ಲಿ ಚಿತ್ರನಟ ಅನಂತನಾಗ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಪಕ್ಷ ಸೇರುವುದು ಇದ್ದೇ ಇರುವಂತಹದು. ಅವರು ಒಬ್ಬ ಒಳ್ಳೆಯ ನಟರು. ಜೆ.ಎಚ್ ಪಟೇಲ್​ ಅವರು ಸಿಎಂ ಇದ್ದಾಗ ನಮ್ಮ ಜೊತೆ ಇದ್ದವರು. ಬಿಜೆಪಿ ಪಕ್ಷ ಸೇರಿಕೊಳ್ಳಲಿ ಯಾರು ಬೇಡ ಎಂದರು. ಇದೇ ಸಮಯದಲ್ಲಿ ಪ್ರಧಾನಮಂತ್ರಿ ಮೋದಿ ಮೇಲಿಂ‌ದ ಮೇಲೆ ಕರ್ನಾಟಕಕ್ಕೆ ಬರುತ್ತಿರುವ ವಿಚಾರವಾಗಿ ಮಾತನಾಡಿ, ಮೋದಿ ಪ್ರವಾಹ ಬಂದಾಗ ಬರಲಿಲ್ಲ, ಕೊವೀಡ್ ಬಂದಾಗ ಬರಲಿಲ್ಲ, ಕೋವಿಡ್​​ ಸಮಯದಲ್ಲಿ ಆಕ್ಸಿಜನ್ ಇಲ್ಲದೇ ಜನ ಸಾವನ್ನಪ್ಪಿದರು, ಆಗಲೂ ಅವರು ಬರಲಿಲ್ಲ. ನಮಗೆ ಕೊಡಬೇಕಿದ್ದ ಆಕ್ಸಿಜನ್ ಬೇರೆಯವರಿಗೆ ಕೊಡಲು ಮುಂದಾಗಿದ್ದರು. ಕೋರ್ಟ್​ ನಮ್ಮ ಪರವಾಗಿ ನಿಂತಿದೆ ಎಂದು ಆಕ್ಸಿಜನ್ ಇಲ್ಲೇ ಉಳಿತು ಎಂದು ಸಿದ್ದರಾಮಯ್ಯ ಆರೋಪಿಸಿದರು.

ಈಗ ಚುನಾವಣೆಗೋಸ್ಕರ ಬರ್ತಿದ್ದಾರೆ. ಚುನಾವಣೆ ಗೆಲ್ಲಬೇಕು ಎನ್ನುವ ಉದ್ದೇಶದಿಂದ ಬರ್ತಿದ್ದಾರೆ. ಜನರ ಅಭಿವೃದ್ಧಿ ಬಗ್ಗೆ ಯೋಚನೆ ಮಾಡುತ್ತಾರಾ? ಅಥವಾ ರೈತರ ಸಮಸ್ಯೆ ವಿಚಾರ ಮಾಡತ್ತಾರಾ? ಬಿಜೆಪಿ ರಾಜ್ಯ ನಾಯಕರಿಗೆ ಜನರಿಗೆ ಮುಖ ತೋರಿಸುವ ಶಕ್ತಿ ಇಲ್ಲ. ಹೀಗಾಗಿ ಮೋದಿ, ನಡ್ಡಾ, ಅಮಿತ್​ ಶಾ ಅವರನ್ನು ರಾಜ್ಯಕ್ಕೆ ಕರೆಸುತ್ತಿದ್ದಾರೆ. ಭ್ರಷ್ಟರು ಆಗಿದ್ದಕ್ಕೆ ಜನರ ಮುಂದೆ ಹೋಗುವುದಕ್ಕೆ ಭಯವಾಗಿದೆ. ಮೋದಿ ಅವರನ್ನು ಮುಂದೆ ಇಟ್ಟುಕೊಂಡು ಬಿಜೆಪಿ ನಾಯಕರು ಹಿಂದಿಂದ ಜನರ ಬಳಿ ಹೋಗ್ತಾ ಇದ್ದಾರೆ ಎಂದು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ನಾನು ಚುನಾವಣೆಗೆ ನಿಲ್ಲೋದಿಲ್ಲ, ಮತ್ತೆ ಸದನಕ್ಕೆ ಬರೋದಿಲ್ಲ: ಭಾವುಕರಾಗಿ ನುಡಿದ ಬಿಎಸ್​ವೈ

ABOUT THE AUTHOR

...view details