ಕರ್ನಾಟಕ

karnataka

ETV Bharat / state

15 ಕ್ಷೇತ್ರಗಳಿಂದ ಆಹ್ವಾನವಿದೆ.. ಮುಂದಿನ ಚುನಾವಣೆಗೆ ಹೈಕಮಾಂಡ್ ಸೂಚಿಸಿದ ಕಡೆ ಸ್ಪರ್ಧೆ: ಸಿದ್ದರಾಮಯ್ಯ - ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ

2023ರ ಚುನಾವಣೆಗೆ ಇನ್ನೂ ಒಂದು ವರ್ಷ ಕಾಲವಿದೆ. ಈಗಲೇ ಎಲ್ಲಿ ಸ್ಪರ್ಧೆ ಮಾಡಬೇಕು ಎಂದು ಹೇಳವುದು ಅಪ್ರಸ್ತುತ. ಸ್ಪರ್ಧೆ ಮಾಡುವ ಬಗ್ಗೆ ಹೈ ಕಮಾಂಡ್​ ನಿರ್ಧಾರ ಮಾಡುತ್ತದೆ. ರಾಜ್ಯದಲ್ಲಿ 10 ರಿಂದ 15 ಕಡೆ ನಿಂತುಕೊಳ್ಳಿ ಅಂತಾ ಕರೆಯುತ್ತಿದ್ದಾರೆ. ಚುನಾವಣೆ ಹತ್ತಿರ ಬಂದಾಗ ನಿರ್ಧಾರ ಮಾಡುತ್ತೇನೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

Siddaramaiah
Siddaramaiah

By

Published : Dec 11, 2021, 6:59 AM IST

ಬಾಗಲಕೋಟೆ: ನನ್ನ ಪರವಾಗಿ ಬನ್ನಿ, ಘೋಷಣೆ ಕೂಗಿ ಅಂತಾ ಯಾರನ್ನೂ ಕರೆದಿಲ್ಲ. ಮುಂದೆಯೂ ಕರೆಯುವುದಿಲ್ಲ ಎಂದು ಬಾದಾಮಿ ಕ್ಷೇತ್ರದ ಶಾಸಕ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಶುಕ್ರವಾರ ವಿಶೇಷ ಹೆಲಿಕಾಪ್ಟರ್ ಮೂಲಕ ಬಾದಾಮಿಗೆ ಆಗಮಿಸಿದ್ದ ಅವರು, ನೇರವಾಗಿ ಪುರಸಭೆಯಲ್ಲಿರುವ ಮತಗಟ್ಟೆಗೆ ಭೇಟಿ ನೀಡಿ ತಮ್ಮ ಹಕ್ಕು ಚಲಾಯಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2023ರ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಕಾಲವಿದೆ. ಈಗಲೇ ಎಲ್ಲಿ ಸ್ಪರ್ಧೆ ಮಾಡಬೇಕು ಎಂದು ಹೇಳುವುದು ಅಪ್ರಸ್ತುತ. ಸ್ಪರ್ಧೆ ಮಾಡುವ ಬಗ್ಗೆ ಹೈ ಕಮಾಂಡ್​ ನಿರ್ಧಾರ ಮಾಡುತ್ತದೆ. ಹೈಕಮಾಂಡ್ ಸೂಚಿಸಿದ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ರಾಜ್ಯದಲ್ಲಿ 10 ರಿಂದ 15 ಕಡೆ ನಿಂತುಕೊಳ್ಳಿ ಅಂತಾ ಕರೆಯುತ್ತಿದ್ದಾರೆ. ಚುನಾವಣೆ ಹತ್ತಿರ ಬಂದಾಗ 2 ತಿಂಗಳು ಇದ್ದಾಗ ನಿರ್ಧಾರ ಮಾಡುತ್ತೇನೆ. ನಾನು ಈಗ ಬಾದಾಮಿ ಶಾಸಕ, 2023 ರವರೆಗೂ ಶಾಸಕನಾಗಿ ಇರುತ್ತೇನೆ, ಆಮೇಲೆ ನೋಡೋಣ ಅಂದ್ರು.

ಬಾದಾಮಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ

ವೇದಿಕೆ ಮೇಲೆ ಬಿ.ಬಿ. ಚಿಮ್ಮನಕಟ್ಟಿ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿದ್ದು, ಕಾಂಗ್ರೆಸ್​ನಲ್ಲಿ ಇಂಟರ್ನಲ್ ಡೆಮಾಕ್ರಸಿ ಇದೆ. ಪಕ್ಷದ ವೇದಿಕೆಯಲ್ಲಿ ಯಾರಾದರೂ ಮಾತನಾಡಬಹುದು. ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಆಂತರಿಕ ಪ್ರಜಾಪ್ರಭುತ್ವ ಇರುವುದು, ಬೇರೆ ಪಕ್ಷಗಳಲ್ಲಿ ಇಲ್ಲ. ಇನ್ನು ಚಿಮ್ಮನಕಟ್ಟಿ ಬಗ್ಗೆ ಮಾತನಾಡಲು ಹೋಗುವುದಿಲ್ಲ. ನಾನು ಅವತ್ತೇ ಮಾತನಾಡಿಲ್ಲ, ಈಗ ಯಾಕೆ ಪ್ರತಿಕ್ರಿಯೆ ನೀಡಲಿ ಎಂದರು.

ABOUT THE AUTHOR

...view details