ಬಾಗಲಕೋಟೆ: ನಗರದ ಟಾಂಗಾ ನಿಲ್ದಾಣ ಬಳಿ ನಗರಸಭೆ ವತಿಯಿಂದ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸಲಾಯಿತು.
ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ ಕೊರೊನಾ ಸಮಯದಲ್ಲಿಯೂ ನಗರಸಭೆ ವತಿಯಿಂದ ತೆರವು ಕಾರ್ಯಚರಣೆಗೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ. ದಿನನಿತ್ಯ ದುಡಿದು ಜೀವನ ಸಾಗಿಸುತ್ತಿರುವ ಬಡ ಕುಟುಂಬಗಳ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸಲಾಯಿತು. ಕೆಲವೇ ಅಂಗಡಿ ತೆರೆವು ಏಕೆ ಮಾಡುತ್ತಿದ್ದೀರಿ. ಮಾರ್ಕೆಟ್ನಲ್ಲಿ ಇರುವ ಎಲ್ಲಾ ಅಂಗಡಿ ತೆರವುಗೊಳಿಸಿ. ನಾಲ್ಕು ಅಂಗಡಿ ಮಾತ್ರ ಏಕೆ ತೆರವುಗೊಳಿಸುತ್ತೀರಿ? ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ವೃದ್ಧೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿ, ಕಳೆದ 40-50 ವರ್ಷಗಳಿಂದಲೂ ಇದರ ಮೇಲೆ ಉಪ ಜೀವನ ನಡೆಸುತ್ತಿದ್ದೇವೆ. ಮೊದಲೇ ಕೊರೊನಾದಿಂದ ಉಪ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ. ಈಗ ಹೀಗೆ ಏಕಾಏಕಿ ತೆರೆವುಗೊಳಿಸಿದರೆ ಎಲ್ಲಿಗೆ ಹೋಗಬೇಕು ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.
ಶಾಲೆ ಮಕ್ಕಳ ಶುಲ್ಕ, ಹೊಟ್ಟೆ ಬಟ್ಟೆಗಾಗಿ ಇಡೀ ಜೀವನ ಇಲ್ಲಿಯೇ ಸವೆಸಿದ್ದೇವೆ. ನಮ್ಮ ಅರ್ಧ ಜೀವನ ಮುಗಿದು ಹೋಗಿದೆ. ಇನ್ನು ಮುಂದೆ ಜೀವನ ಹೇಗೆ ನಡೆಸುವುದು ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಲಾಕ್ಡೌನ್ ವೇಳೆ ತೆರವು ಅವಶ್ಯಕತೆ ಇತ್ತಾ? ಇದರಿಂದ ಮತ್ತೆ ಗುಂಪಾಗಿ ಕೂಡುವಂತಾಗಿದೆ. ಲಾಕ್ಡೌನ್ ಬಳಿಕ ನಿರ್ಧಾರ ತೆಗೆದುಕೊಳ್ಳಬಹುದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.