ಕರ್ನಾಟಕ

karnataka

ETV Bharat / state

ಭಾರತದ ಸಂಸ್ಕೃತಿಯಲ್ಲಿ ವಿಶ್ವಕರ್ಮರ ಕೊಡುಗೆ ಅಪಾರ : ಡಾ.ಮಹೇಶ ಪೋತದಾರ - ಡಾ.ಮಹೇಶ ಪೋತದಾರ

ಸರ್ವ ಸಮಾಜದ ಸೇವೆಗೈಯುವವರಾದ ಇವರು ನಿಷ್ಠೆಯ ಪ್ರವೃತ್ತರು ಮತ್ತು ಪ್ರತಿಭಾವಂತ ಸಾಮರ್ಥ್ಯವುಳ್ಳವರಾಗಿದ್ದಾರೆ. ಅಲ್ಲದೆ ಭಾರತದ ಸಂಸ್ಕೃತಿಯಲ್ಲಿ ವಿಶ್ವಕರ್ಮರ ಕೊಡುಗೆ ಅಪಾರ..

Bagalkote
ಶ್ರೀ ಮಳೆ ರಾಜೇಂದ್ರಸ್ವಾಮಿ ಮಠ

By

Published : Sep 23, 2020, 9:12 PM IST

ಬಾಗಲಕೋಟೆ :ವಿಶ್ವಕರ್ಮರು ವಿಶ್ವಾಸರ್ಹರು ಅವರು ಸಮಾಜದ ಒಳಿತಿಗಾಗಿ ಬದುಕಿದವರು ಎಂದು ಸಮಾಜಕಲ್ಯಾಣ ಇಲಾಖೆಯ ಬಾಗಲಕೋಟೆ ಜಿಲ್ಲಾ ಉಪ ನಿರ್ದೇಶಕ ಡಾ.ಮಹೇಶ ಪೋತದಾರ ಹೇಳಿದರು.

ಮಯ ಪ್ರಕಾಶನ ಕಮಲಾಪುರ (ಬೆಣ್ಣೂರು) ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ (ರಿ) ಶಿರಸಂಗಿ ಹಾಗೂ ಉತ್ತರ ಕರ್ನಾಟಕ ಕ್ಷೇಮಾಭಿವೃದ್ಧಿ ಸಂಘ (ರಿ) ಬೆಂಗಳೂರು ಇವರ ಸಹಯೋಗದಲ್ಲಿ ಬಾಗಲಕೋಟ ಜಿಲ್ಲೆಯ ಮುರನಾಳ ಗ್ರಾಮದ ಶ್ರೀ ಮಳೆ ರಾಜೇಂದ್ರ ಸ್ವಾಮಿ ಮಠದಲ್ಲಿ ನಡೆದ ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರರ ಹಾಗೂ ಸಂಶೋಧಕರ ದ್ವಿತೀಯ ಸಮಾವೇಶ ಉದ್ಘಾಟಿಸಿಮಾತನಾಡಿದ ಅವರು, ಸರ್ವ ಸಮಾಜದ ಸೇವೆಗೈಯುವವರಾದ ಇವರು ನಿಷ್ಠೆಯ ಪ್ರವೃತ್ತರು ಮತ್ತು ಪ್ರತಿಭಾವಂತ ಸಾಮರ್ಥ್ಯವುಳ್ಳವರಾಗಿದ್ದಾರೆ. ಅಲ್ಲದೆ ಭಾರತದ ಸಂಸ್ಕೃತಿಯಲ್ಲಿ ವಿಶ್ವಕರ್ಮರ ಕೊಡುಗೆ ಅಪಾರ ಎಂದರು.

ಆನ್​ಲೈನ್​ನಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಸಮಾವೇಶದ ಮುಖ್ಯ ನಿರ್ದೇಶಕರಾದ ಡಾ. ವೀರೇಶ್ ಬಡಿಗೇರ ಅವರು, ಈ ಉತ್ತರ ಕರ್ನಾಟಕ ವಿಶ್ವಕರ್ಮರ ಯುವ ಬರಹಗಾರರ ಹಾಗೂ ಸಂಶೋಧಕರ ವೇದಿಕೆ ಉದ್ದೇಶ ಮತ್ತು ಮುಂದೆ ಸಾಹಿತ್ಯಿಕವಾಗಿ ಆಗಬೇಕಿರುವ ಕಾರ್ಯಗಳ ಬಗ್ಗೆ ತಿಳಿಸಿದರು.

ಸಮಾವೇಶದ ಅಧ್ಯಕ್ಷತೆವಹಿಸಿ ಮಾತನಾಡಿದ ಶಿರಸಂಗಿಯ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷರಾದ ಪಿ ಬಿ ಬಡಿಗೇರ ಮಾತನಾಡಿ, ಶಿರಸಂಗಿಯಲ್ಲಿ ಅಖಿಲ ಭಾರತ ವಿಶ್ವಕರ್ಮ ಸಾಹಿತ್ಯ ಸಮ್ಮೇಳನವನ್ನು ಈ ಯುವ ಬರಹಗಾರರ ವೇದಿಕೆ ಆಯೋಜಿಸಿದ್ರೆ ಅದಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ಸಮಾವೇಶದ ಸಾನಿಧ್ಯವಹಿಸಿದ್ದ ಮಳೆರಾಜೇಂದ್ರಸ್ವಾಮಿ ಪರಮಪೂಜ್ಯ ಜಗನ್ನಾಥ ಮಹಾಸ್ವಾಮಿಗಳು ಮಠ, ಮಂದಿರಗಳಲ್ಲಿ ಧಾರ್ಮಿಕ ಆಧ್ಯಾತ್ಮದ ಜೊತೆಗೆ ಸಾಹಿತ್ಯಿಕ ಬೆಳವಣಿಗೆಯಾಗಬೇಕು. ಶ್ರೀ ಮೌನೇಶ್ವರರ ವಚನಗಳು ಇಂದು ಪ್ರಚಾರವಾಗಬೇಕಿದೆ ಎಂದರು.

ಸಮಾವೇಶದ ಕಾರ್ಯಕ್ರಮದ ವೇದಿಕೆಯಲ್ಲಿ ಇನ್ನೋರ್ವ ಶ್ರೀಮಠದ ಶ್ರೀಗಳಾದ ನಿತ್ಯಾನಂದ ಮಹಾಸ್ವಾಮಿಗಳು, ನಾಡಿನ ಹೆಸರಾಂತ ಸಂಶೋಧಕರಾದ ಡಾ.ಶಿಲಾಕಾಂತ ಪತ್ತಾರ್, ಖ್ಯಾತ ಸಿತಾರ್ ವಾದಕರಾದ ವಿಶ್ವನಾಥಸ್ವಾಮಿ ಮಹಾಪುರುಷ ಸೇರಿ ಸಾಹಿತಗಳಾದ ಪ್ರಕಾಶ ಖಾಡೆ, ಮನುದ್ದಿನ ರೇವಡಿಗಾರ, ವೀರೇಂದ್ರ ಶೀಲವಂತ, ವಿಶ್ವನಾಥ ಪತ್ತಾರ್, ವಿಶ್ವಕರ್ಮ ಸಮಾಜ ಕ್ಷೇಮಾಭಿವೃದ್ದಿ ಸಂಘದ ಅದ್ಯಕ್ಷರಾದ ಶಂಕ್ರಪ್ಪ ಪತ್ತಾರ್ ಸೇರಿ ಇತರರು ಉಪಸ್ಥಿತರಿದ್ದರು.

ABOUT THE AUTHOR

...view details