ಬಾಗಲಕೋಟೆ: ನಾನು ಮಂತ್ರಿಯಾಗಬೇಕು ಎಂಬ ಆಸೆಯನ್ನೇ ಇಟ್ಟುಕೊಂಡಿರಲಿಲ್ಲ. ಮಲಗಿದ್ದವನನ್ನ ಎಬ್ಬಿಸಿ ಮಂತ್ರಿ ಮಾಡಿ , ಡಿಸಿಎಂ ಸ್ಥಾನವನ್ನ ಕೊಟ್ಟಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಜಿಲ್ಲೆಯ ರಬಕವಿ -ಬನ್ನಹಟ್ಟಿ ತಾಲೂಕಿನ ಹಳಂಗಲಿ ಗ್ರಾಮದಲ್ಲಿ ಭದ್ರಗಿರಿಯ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಮಂತ್ರಿ ಆಗಬೇಕೆಂದು ಎಂದಿಗೂ ಆಸೆ ಪಟ್ಟವನಲ್ಲ. ನನಗೆ ಮಂತ್ರಿ ಆಗುತ್ತೇನೆ ಎಂದು ಗೊತ್ತಿರಲಿಲ್ಲ. ನಾನು ರಾತ್ರಿ ಮಲಗಿದ್ದ ವೇಳೆ 2 ಗಂಟೆಗೆ ಕರೆ ಮಾಡಿ ನನ್ನನ್ನು ಮಂತ್ರಿಯನ್ನಾಗಿ ಮಾಡಿದ್ದಾರೆ ಎಂದರು.