ಬಾಗಲಕೋಟೆ:ಹಿಂದೂ ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕುವಾಗ ಮುಸ್ಲಿಂ ಹೆಣ್ಣು ಮಕ್ಕಳು ತಲೆ ಮೇಲೆ ದುಪಟ್ಟಾ ಹಾಕಿಕೊಳ್ಳಬಾರದೇ ಎಂದು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಈ ಬಗ್ಗೆ ನನಗೇನು ಗೊತ್ತಿಲ್ಲ. ವಿಚಾರ ತಿಳಿದುಕೊಂಡು ಮಾತನಾಡುತ್ತೇನೆ ಎಂದರು.
ಹಿಂದೂ ದೇಗುಲದ ಆವರಣದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ವಿಚಾರವಾಗಿ ಮಾತನಾಡಿ, ಇದೆಲ್ಲಾ ಯಶಸ್ವಿ ಆಗೋದಿಲ್ಲ. ಸಾವಿರಾರು ವರ್ಷಗಳಿಂದ ಎಲ್ಲರೂ ಸೇರಿ ವ್ಯಾಪಾರ ಮಾಡಿದ್ದಾರೆ. ಸುಮ್ಮನೆ ಈ ವಿಚಾರದಲ್ಲಿ ರಾಜಕೀಯ ಬೆರೆಸುತ್ತಿದ್ದಾರೆ ಅಷ್ಟೇ. ಯಾರೋ ಹೇಳ್ತಾರೆ ಅಂತ ಹಿಂದೂಗಳನ್ನಾಗಲಿ, ಮುಸ್ಲಿಂರನ್ನಾಗಲಿ ಹೊರ ಹಾಕಲು ಸಾಧ್ಯವಿಲ್ಲ. ಹರ್ಷನ ಹತ್ಯೆ ಆಯ್ತು, ಹಿಜಾಬ್ ಆಯ್ತು, ಈಗ ಈ ವಿಷಯ ಇಟ್ಟುಕೊಂಡಿದ್ದಾರೆ. ಇವರಿಗೆ ತಿಂಗಳಿಗೊಂದು ವಿಷಯ ಬೇಕು. ಅದಕ್ಕೆ ಇಂತಹ ವಿಚಾರಗಳಲ್ಲಿ ಸಮಾಜದ ಶಾಂತಿ ಕದಡುತ್ತಾರೆ ಎಂದರು.