ಬಾಗಲಕೋಟೆ :ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ ಹಾನಗಲ್ ಕುಮಾರೇಶ್ವರ ಮೆಡಿಕಲ್ ಕಾಲೇಜ್‌ನ ಔಷಧ ವಿಭಾಗದಲ್ಲಿ ಸ್ಯಾನಿಟೈಜರ್ ತಯಾರಿಸಿ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ.
ಸ್ಯಾನಿಟೈಸರ್ ತಯಾರಿಸಿ ಉಚಿತ ವಿತರಿಸುತ್ತಿದೆ ಹಾನಗಲ್ ಕುಮಾರೇಶ್ವರ ಮೆಡಿಕಲ್ ಕಾಲೇಜ್.. - Distribution of sanitizer
ವೈದ್ಯಕೀಯ ಮಹಾವಿದ್ಯಾಲಯ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಇತರ ಸಿಬ್ಬಂದಿ ಜಿಲ್ಲಾಡಳಿತ ಭವನಕ್ಕೆ ಆಗಮಿಸಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿಗೆ ಹಾಗೂ ಪತ್ರಕರ್ತರಿಗೂ ಸ್ಯಾನಿಟೈಜರ್‌ನ ಉಚಿತವಾಗಿ ವಿತರಿಸಿದರು.
ತಾವೇ ಸಾನಿಟೈಸರ್ ತಯಾರಿಸಿ ಹಂಚುತ್ತಿರುವ ಹಾನಗಲ್ ಕುಮಾರೇಶ್ವರ ಮೆಡಿಕಲ್ ಕಾಲೇಜ್ ಸಿಬ್ಬಂದಿ
ವೈದ್ಯಕೀಯ ಮಹಾವಿದ್ಯಾಲಯ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಇತರ ಸಿಬ್ಬಂದಿ ಜಿಲ್ಲಾಡಳಿತ ಭವನಕ್ಕೆ ಆಗಮಿಸಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿಗೆ ಹಾಗೂ ಪತ್ರಕರ್ತರಿಗೂ ಸ್ಯಾನಿಟೈಜರ್‌ನ ಉಚಿತವಾಗಿವಿತರಿಸಿದರು.
ಇದಷ್ಟೇ ಅಲ್ಲ, ಒಟ್ಟು 2000 ಬಾಟಲ್ ಸ್ಯಾನಿಟೈಸರ್‌ನ ತಯಾರಿಸಿ ಉಚಿತವಾಗಿ ವಿತರಿಲು ನಿರ್ಧರಿಸಲಾಗಿದೆ. ಈಬಗ್ಗೆ ಈಟಿವಿ ಭಾರತದೊಂದಿಗೆ ಪ್ರಾಚಾರ್ಯರು ಮಾತನಾಡಿ, ಸಂಘದ ಕಾರ್ಯಾಧ್ಯಕ್ಷರು ಹಾಗೂ ಶಾಸಕರಾದ ವೀರಣ್ಣ ಚರಂತಿಮಠ ಅವರ ಮಾರ್ಗದರ್ಶನದ ಮೂಲಕ ಸ್ಯಾನಿಟೈಸರ್ ತಯಾರು ಮಾಡಿ ನೀಡಲಾಗುತ್ತಿದೆ ಎಂದು ತಿಳಿಸಿದರು.