ಕರ್ನಾಟಕ

karnataka

ETV Bharat / state

ಗಂಧದ ಮರ ಕಡಿದು ಮಾರಾಟ : ಇಬ್ಬರ ಬಂಧನ - ಜಿಂಕಾರ ವನ್ಯಜೀವಿ ಧಾಮ

ಬೀಳಗಿ ತಾಲೂಕಿನ ಅಮಲಝರಿ ಗ್ರಾಮದಲ್ಲಿ ಶ್ರೀಗಂಧದ ಮರ ಕಡಿದು ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಬಂಧಿಸಲಾಗಿದೆ.

Theft arrest
Theft arrest

By

Published : Aug 29, 2020, 5:51 PM IST

ಬಾಗಲಕೋಟೆ: ಶ್ರೀಗಂಧದ ಮರ ಕಡಿದು ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿರುವ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಅಮಲಝರಿ ಗ್ರಾಮದಲ್ಲಿ ಜರುಗಿದೆ.

ಒಂದು ಲಕ್ಷ ಮೌಲ್ಯದ ಶ್ರೀಗಂಧ ಮರ, ಒಂದು ಬೈಕ್, ಮರ ಕಡಿಯಲು ಉಪಯೋಗಿಸುವ ಸಾಮಗ್ರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಬೀಳಗಿ ತಾಲೂಕಿನ ಜಿಂಕಾರ ವನ್ಯಜೀವಿ ಧಾಮ, ಅಮಲಝರಿ ಅರಣ್ಯ ಪ್ರದೇಶದಲ್ಲಿ ಅರಕೇರಿ ಗ್ರಾಮದ ವಿಠ್ಠಲ ಹಿರಕಣ್ಣನವರ (22), ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ರಮೇಶ ಕಾಳೆ (32) ಎಂಬುವರನ್ನು ಬಂಧಿಸಲಾಗಿದೆ.

ಬೀಳಗಿ ವಲಯ ಅರಣ್ಯ ಅಧಿಕಾರಿ ಎಚ್.ಬಿ. ಡೋಣಿ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಅರಣ್ಯ ಕಚೇರಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿದೆ.

ABOUT THE AUTHOR

...view details