ಬಾಗಲಕೋಟೆ : ಮೇ 4 ರಿಂದ 8ರವರೆಗೆ ಐದು ದಿನಗಳ ಕಾಲ ಸ್ಯಾಂಡಲ್‍ವುಡ್ ಕ್ರಿಕೆಟ್ ಕಪ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿದೆ. ಇದರಲ್ಲಿ ಪ್ರಮುಖ ನಟ-ನಟಿಯರು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಸ್ಥಳೀಯರಿಗೆ ಮನರಂಜನೆ ನೀಡಲಿದ್ದಾರೆ ಎಂದು ನಟಿ ಮಯೂರಿ ಶಾ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದನಕೊಳ್ಳದ ಡಾ.ಶಿವಕುಮಾರ್ ಸ್ವಾಮೀಜಿ ಅವರ ಆಶೀರ್ವಾದದಿಂದ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ. ಸಿದ್ದನಕೊಳ್ಳ ಕಲಾಪೋಷಕರ ಮಠ, ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ, ಪಿ. ದೀಕ್ಷಿತ ಫೌಂಡೇಶನ್, ಎ.ಬಿ.ನೆಟ್ವಕ್ರ್ಸ್ ಬೆಂಗಳೂರು, ಬ್ಲೂಪಿಂಚ್ ಇವೆನಟ್ಸ್, ಪಿಯೋನಿಕ್ಸ್ ನೆಟವರ್ಕ ಹಾಗೂ ನವ ಕರ್ನಾಟಕ ಚಲನಚಿತ್ರ ಅಕ್ಯಾಡೆಮಿ, ಸಲ್ಯೂಟ್ ಗ್ರಾಮೀಣ ಅಭಿವೃದ್ದಿ ಯುವ ಸಂಸ್ಥೆ ಕರ್ನಾಟಕ ವತಿಯ ಸಹಯೋಗದಲ್ಲಿ ನಡೆಯಲಿದ್ದು, ಎಂಟು ತಂಡಗಳು ಪಂದ್ಯವಾಳಿಯಲ್ಲಿ ಭಾಗವಹಿಸಲಿವೆ ಎಂದು ಹೇಳಿದರು.
ನಿರ್ದೇಶಕರಾದ ಅದತ್ ಖಾನ ಎಂಬುವರು ಮಾತನಾಡಿ, 150ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಪ್ರಮುಖವಾಗಿ ಉಪೇಂದ್ರ, ಸುದೀಪ್, ಜಗ್ಗೇಶ್, ರಾಗಿಣಿ, ಹರಿಪ್ರಿಯಾ, ಥ್ಲಿಲ್ಲರ್ ಮಂಜು, ಕಾಮಿಡಿ ಕಲಾವಿದರು ಸೇರಿದಂತೆ ಇನ್ನೂ ಪ್ರಮುಖ ನಟ-ನಟಿಯರು ಆಗಮಿಸುವ ನಿರೀಕ್ಷೆಯಿದೆ ಎಂದರು.