ಬಾಗಲಕೋಟೆ :ನಗರದ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಬಾಗಲಕೋಟೆ ಮುದ್ರಣ ಮತ್ತು ಎಲ್ಲಾ ಪುಟಗಳ ಕಲರ್ ಮುದ್ರಣಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಕಾರಜೋಳ, ಪ್ರಾದೇಶಿಕ ಪತ್ರಿಕೆಯಿಂದ ಎಲ್ಲ ಪ್ರದೇಶಗಳಿಗೂ ಸುದ್ದಿ ಮುಟ್ಟುತ್ತದೆ. ಗಾಂಧೀಜಿ ಪ್ರಾದೇಶಿಕ ಪತ್ರಿಕೆಯನ್ನು ತೆರದು ಸ್ವಾತಂತ್ಯದ ಬಗ್ಗೆ ಸುದ್ದಿ ಮುಟ್ಟಿಸುವಂತಹ ಕಾರ್ಯ ಮಾಡುತ್ತಿದ್ದರು ಎಂದು ಹೇಳಿದರು. ಸಂಯುಕ್ತ ಕರ್ನಾಟಕ ಪತ್ರಿಕೆ ಪ್ರಾದೇಶಿಕವಾಗಿ ಸುದ್ದಿ ಪ್ರಕಟಿಸಿ ಜನರ ಗಮನ ಸೆಳೆದಿರುವುದು ಶ್ಲಾಘನೀಯ. ಈಗ ಮತ್ತೊಂದು ಹೆಜ್ಜೆ ಮುಂದೆಯಿಟ್ಟು ಎಲ್ಲಾ ಪುಟಗಳನ್ನು ಕಲರ್ ಮಾಡಿರುವುದು ಓದುಗರ ಮೆಚ್ಚುಗೆಗೆ ಪಾತ್ರವಾಗಲಿದೆ ಎಂದರು.