ಕರ್ನಾಟಕ

karnataka

ETV Bharat / state

ಬಾಗಲಕೋಟೆಯಲ್ಲಿ ಅಕ್ರಮ ಪಡಿತರ ಸಾಗಾಟ: 100 ಕ್ವಿಂಟಾಲ್​ ಅಕ್ಕಿ ವಶ - ಬಾಗಲಕೋಟೆ ಅಕ್ರಮ ಪಡಿತರ ಅಕ್ಕಿ ಸಾಗಾಟ

ಸರ್ಕಾರದ ವಿವಿಧ ಯೋಜನೆಗೆ ವಿತರಿಸಬೇಕಾದ ಅಂದಾಜು 100 ಕ್ವಿಂಟಾಲ್ ಅಕ್ಕಿಯನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಲಾರಿಯನ್ನು ಆಹಾರ ಮತ್ತು ಪೋಲಿಸ್ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

Trafficking in illegal rations 100 quintals of rice seized
ಅಕ್ರಮ ಅಕ್ಕಿ ಸಾಗಾಟ

By

Published : Dec 6, 2020, 8:32 PM IST

ಬಾಗಲಕೋಟೆ : ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣಿಕೆ ಮಾಡುತ್ತಿದ್ದ ಲಾರಿಯನ್ನು ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.

ಅಕ್ರಮ ಅಕ್ಕಿ ಸಂಗ್ರಹಣೆ

ನವನಗರ ಎಪಿಎಂಸಿ ಆವರಣದಲ್ಲಿ ಸರ್ಕಾರದ ವಿವಿಧ ಯೋಜನೆಗೆ ವಿತರಿಸಬೇಕಾದ ಅಪಾರ ಪ್ರಮಾಣದ ಅಕ್ಕಿಯನ್ನು ಲಾರಿ ಸಮೇತ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಓದಿ-ಮಹಿಳಾ ಸದಸ್ಯೆ ನೂಕಾಟ ಪ್ರಕರಣ: ಸಿದ್ದು ಸವದಿ ವಿರುದ್ಧ ಸಿದ್ದರಾಮಯ್ಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ಮತ್ತೊಂದೆಡೆ, ಮುಚಖಂಡಿ‌ ಗ್ರಾಮದಲ್ಲಿ 14 ಕ್ವಿಂಟಾಲ್ ಅಕ್ಕಿಯನ್ನು ಸಂಗ್ರಹಣೆ ಮಾಡಿದ್ದ ಕೇಂದ್ರದ ಮೇಲೆ‌ ದಾಳಿ ಮಾಡಿ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಅವಶ್ಯಕ ವಸ್ತುಗಳ ಕಾಯ್ದೆಯಡಿ ಎರಡು ಪ್ರಕರಣ ದಾಖಲು ಮಾಡಿ ತನಿಖೆ ನಡೆಸಲಾಗಿದೆ ಎಂದು ಆಹಾರ ಇಲಾಖೆಯ‌ ಉಪ‌ ನಿರ್ದೇಶಕ ಶ್ರೀಶೈಲ ಕಂಕಣವಾಡಿ ತಿಳಿಸಿದ್ದಾರೆ.

ABOUT THE AUTHOR

...view details