ಕರ್ನಾಟಕ

karnataka

ETV Bharat / state

ಬಾಗಲಕೋಟೆಯಲ್ಲಿ ಗುಂಡು ಹಾರಿಸಿಕೊಂಡು ನಿವೃತ್ತ ಜಡ್ಜ್ ಆತ್ಮಹತ್ಯೆ - ಗುಂಡು ಹಾರಿಸಿಕೊಂಡು ನಿವೃತ್ತ ಜಡ್ಜ್ ಆತ್ಮಹತ್ಯೆ

ಬಾಗಲಕೋಟೆಯಲ್ಲಿ ನಿವೃತ್ತ ಜಡ್ಜ್​​ ಒಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿವೃತ್ತ ಜಡ್ಜ್ ಆತ್ಮಹತ್ಯೆ
ನಿವೃತ್ತ ಜಡ್ಜ್ ಆತ್ಮಹತ್ಯೆ

By

Published : May 21, 2022, 9:05 PM IST

ಬಾಗಲಕೋಟೆ: ಕಡ್ಡಾಯ ನಿವೃತ್ತಿ ಹೊಂದಿದ್ದ ಜಡ್ಜ್​ವೊಬ್ಬರು ತಮ್ಮ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ನವನಗರದಲ್ಲಿ ನಡೆದಿದೆ. ಮಾನಪ್ಪ ತಳವಾರ(53)ಆತ್ಮಹತ್ಯೆ ಮಾಡಿಕೊಂಡವರು.

ನವನಗರದ ಸೆಕ್ಟರ್ ನಂ.16 ರಲ್ಲಿರುವ ಮನೆಯಲ್ಲಿ ಶೂಟೌಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇವರು ಕಲಬುರಗಿ ಜಿಲ್ಲೆಯ ಚಿತ್ತಾಪುರ ನ್ಯಾಯಾಲಯದಲ್ಲಿ ಜಡ್ಜ್ ಆಗಿದ್ದರು.

ಮೃತ ಜಡ್ಜ್​​ಗೆ ಇಬ್ಬರು ಪತ್ನಿಯರು ಇದ್ದು, ಮೊದಲ ಪತ್ನಿ ಬೆಂಗಳೂರಲ್ಲಿ ಜಡ್ಜ್ ಆಗಿದ್ದಾರೆ. ಎರಡನೇ ಪತ್ನಿ ಜೊತೆ ನವನಗರದಲ್ಲಿ ಮಾನಪ್ಪ ತಳವಾರ ನೆಲೆಸಿದ್ದರು. ಮೂಲತಃ ಬಾಗಲಕೋಟೆ ತಾಲೂಕಿನ ಹಿರೇಶೆಲ್ಲಿಕೇರಿ ಗ್ರಾಮದವರಾಗಿದ್ದಾರೆ. ನವನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಟಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

(ಇದನ್ನೂ ಓದಿ: ಶಾಪಿಂಗ್​ ಕಾಂಪ್ಲೆಕ್ಸ್​ನಿಂದ ಬಿದ್ದು ಯುವತಿ ಸಾವು: ರಕ್ಷಿಸಲು ಬಂದ ಯುವಕನೂ ಕೆಳಗೆ ಬಿದ್ದ!)

ABOUT THE AUTHOR

...view details