ಕರ್ನಾಟಕ

karnataka

ETV Bharat / state

ಬಾಗಲಕೋಟೆಯಲ್ಲಿ ಒಂದೇ ಕಡೆ 10 ಸಾವಿರ ಜನರಿಂದ ದಾಖಲೆಯ ಬಣ್ಣದೋಕುಳಿ - record Holi celebration in bagalakote

ಬನಹಟ್ಟಿ ಪಟ್ಟಣದ ಹೋಳಿ ಆಚರಣೆಗಾಗಿ ನಿರ್ಮಿಸಲಾಗಿದ್ದ ವೇದಿಕೆಯನ್ನು ಪುನೀತ್​ ರಾಜಕುಮಾರ್ ವೇದಿಕೆ ಎಂದು ನಾಮಕರಣ ಮಾಡಿ, ಎಲ್ಲೆಡೆ ಅಪ್ಪು ಫೋಟೋ ರಾಜಾಜಿಸುವಂತೆ ಮಾಡಲಾಗಿತ್ತು. ಈ ವೇಳೆ ಪ್ರೊ.ಬಿ.ಕೆ. ಕೊಣ್ಣೂರ, ಸಿದ್ದು ಕೊಣ್ಣೂರ್​​ ಬಣ್ಣದ ಮಹತ್ವದ ಬಗ್ಗೆ ಮಾತನಾಡಿದರು..

celebration
ಬಣ್ಣದೋಕುಳಿ

By

Published : Mar 18, 2022, 7:51 PM IST

Updated : Mar 18, 2022, 9:50 PM IST

ಬಾಗಲಕೋಟೆ :ಬಾಗಲಕೋಟೆ ಜಿಲ್ಲೆ ಬಣ್ಣದೋಕುಳಿಗೆ ಖ್ಯಾತಿಯಾಗಿದೆ. ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಇಂದು ನಡೆದ ಹೋಳಿ ಹಬ್ಬ ವಿನೂತನ ಹಾಗೂ ವಿಶೇಷತೆಯಿಂದ ಕೂಡಿತ್ತು. ಒಂದೇ ಸೂರಿನಲ್ಲಿ 10 ಸಾವಿರಕ್ಕೂ ಅಧಿಕ ಜನ ಬಣ್ಣದೋಕಳಿ ಆಡಿ ದಾಖಲೆ ನಿರ್ಮಿಸಿದ್ದಾರೆ.

ತಾಲೂಕಿನ ಮಹಾಲಿಂಗಪುರ, ತೇರದಾಳ ಸೇರಿದಂತೆ ಸುತ್ತಲಿನ ಗ್ರಾಮಸ್ಥರು, ಅದರಲ್ಲೂ ಮಹಿಳೆಯರು ಬೆಳಗ್ಗೆಯಿಂದಲೇ ತಂಡೋಪತಂಡವಾಗಿ ಬನಹಟ್ಟಿಯ ಎಸ್‌ಆರ್‌ಎ ಮೈದಾನದತ್ತ ಹರಿದು ಬಂದು, ಸಿದ್ದು ಕೊಣ್ಣೂರ ಅಭಿಮಾನಿ ಬಳಗದಿಂದ ಹಮ್ಮಿಕೊಂಡ ಬಣ್ಣದೋಕುಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಿಂದೆದ್ದರು.

ಬಾಗಲಕೋಟೆಯಲ್ಲಿ ಒಂದೇ ಕಡೆ 10 ಸಾವಿರ ಜನರಿಂದ ದಾಖಲೆಯ ಬಣ್ಣದೋಕುಳಿ

ಬನಹಟ್ಟಿ ಪಟ್ಟಣದ ಹೋಳಿ ಆಚರಣೆಗಾಗಿ ನಿರ್ಮಿಸಲಾಗಿದ್ದ ವೇದಿಕೆಯನ್ನು ಪುನೀತ್​ ರಾಜಕುಮಾರ್ ವೇದಿಕೆ ಎಂದು ನಾಮಕರಣ ಮಾಡಿ, ಎಲ್ಲೆಡೆ ಅಪ್ಪು ಫೋಟೋ ರಾಜಾಜಿಸುವಂತೆ ಮಾಡಲಾಗಿತ್ತು. ಈ ವೇಳೆ ಪ್ರೊ.ಬಿ.ಕೆ. ಕೊಣ್ಣೂರ, ಸಿದ್ದು ಕೊಣ್ಣೂರ್​​ ಬಣ್ಣದ ಮಹತ್ವದ ಬಗ್ಗೆ ಮಾತನಾಡಿದರು.

ಓದಿ:ಬಣ್ಣದಾಟದ ವೇಳೆ ವಿದ್ಯುತ್ ತಂತಿ ಸ್ಪರ್ಶ: ವಿಜಯಪುರದಲ್ಲಿ ಬಾಲಕ ಸಾವು

Last Updated : Mar 18, 2022, 9:50 PM IST

ABOUT THE AUTHOR

...view details