ಬಾಗಲಕೋಟೆ: ಗುರುವಾರ ಲಿಂಗೈಕ್ಯರಾದಮಾತೆ ಮಹಾದೇವಿ ಅವರ ಅಂತಿಮ ಸಂಸ್ಕಾರಜಿಲ್ಲೆಯ ಕೂಡಲಸಂಗಮದಲ್ಲಿನಡೆಯಲಿದ್ದು, ಸಕಲ ಸಿದ್ದತೆ ನಡೆಸಲಾಗಿದೆ.
ಕೂಡಲಸಂಗಮದಲ್ಲಿ ಮಾತೆ ಮಹಾದೇವಿ ಅಂತಿಮ ಸಂಸ್ಕಾರಕ್ಕೆ ಸಕಲ ಸಿದ್ದತೆ - ಅಂತಿಮ ಸಂಸ್ಕಾರ
ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ನೇತೃತ್ವದಲ್ಲಿ ಮಾತೆ ಮಹಾದೇವಿ ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲು ಸಿದ್ಧತೆ ನಡೆದಿದೆ.
![ಕೂಡಲಸಂಗಮದಲ್ಲಿ ಮಾತೆ ಮಹಾದೇವಿ ಅಂತಿಮ ಸಂಸ್ಕಾರಕ್ಕೆ ಸಕಲ ಸಿದ್ದತೆ](https://etvbharatimages.akamaized.net/etvbharat/images/768-512-2705488-839-00a171f2-3b72-413a-8565-81ae7d7f9c51.jpg)
ಮಾತೆ ಮಹಾದೇವಿ
ಪ್ರತಿ ವರ್ಷ ಶರಣ ಮೇಳ ನಡೆಯುವ ಸ್ಥಳದಲ್ಲಿ ಬೃಹತ್ ಪೆಂಡಾಲ್ ಹಾಕಿದ್ದು, ಮಾತಾಜಿ ಅವರ ಅಂತಿಮ ದರ್ಶನ ನಡೆಯುತ್ತಿದೆ. ರಾಜ್ಯದ ವಿವಿಧ ಪ್ರದೇಶಗಳಿಂದ ಮಾತಾಜೀ ಅವರ ಅಂತಿಮ ದರ್ಶನ ಪಡೆಯಲಿಕ್ಕೆ ಭಕ್ತರು ಆಗಮಿಸಿದ್ದಾರೆ.
ಮಾತೆ ಮಹಾದೇವಿ
ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವ ನೀಡಲು ಸಜ್ಜು ಮಾಡಲಾಗಿದೆ. ಸಾಮೂಹಿಕ ಪ್ರಾರ್ಥನೆ, ವಚನ ಗಾಯನ ಸೇರಿದಂತೆ ಶಿವನಾಮ ಸ್ಮರಣೆ ನಡೆಸಲಾಗಿದೆ.