ಕರ್ನಾಟಕ

karnataka

ETV Bharat / state

ಈ ಬಾರಿ ವಿಜಯಾನಂದ ಕಾಶಪ್ಪನವರನ್ನು ​ಮನೆಗೆ ಕಳುಹಿಸಬೇಕು: ರಮೇಶ್​ ಜಾರಕಿಹೊಳಿ - ಈಟಿವಿ ಭಾರತ ಕನ್ನಡ

ಬಾಗಲಕೋಟೆಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ - ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ವಾಗ್ದಾಳಿ ನಡೆಸಿದ ರಮೇಶ್​ ಜಾರಕಿಹೊಳಿ

ramesh-jarkiholi-slams-vijayananda-kashappanavar
ಈ ಬಾರಿ ವಿಜಯಾನಂದ ಕಾಶಪ್ಪನವರನ್ನು ಮನೆಗೆ ಕಳುಹಿಸಬೇಕು : ರಮೇಶ್​ ಜಾರಕಿಹೊಳಿ

By

Published : Mar 15, 2023, 5:50 PM IST

ಬಾಗಲಕೋಟೆ :ಸುಳ್ಳು ಹೇಳುವ ಕಾಂಗ್ರೆಸ್​ ಪಕ್ಷವನ್ನು ಮನೆಗೆ ಕಳುಹಿಸಬೇಕು. ನಿಜವಾದ ಕೋಮುವಾದಿ ಪಕ್ಷ ಎಂದರೆ ಅದು ಕಾಂಗ್ರೆಸ್​​ ಎಂದು ಮಾಜಿ ಸಚಿವ ರಮೇಶ್​ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ. ಇಲಕಲ್ಲ ಪಟ್ಟಣದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಸಂಕಲ್ಪ ಯಾತ್ರೆಯ ಸಂಕಲ್ಪ ಏನೆಂದರೆ ಕಾಂಗ್ರೆಸ್​ ಪಕ್ಷವನ್ನು ಮನೆಗೆ ಕಳುಹಿಸಬೇಕು. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರನ್ನು ಮನೆಗೆ ಕಳುಹಿಸಬೇಕು. ಅವರು ಬೇರೆ ಸಮುದಾಯದ ಜನರ ಮತ ಕೇಳುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಶಪ್ಪನವರ್​ ವಿರುದ್ಧ ಜಾರಕಿಹೊಳಿ ಕಿಡಿ :ಪ್ರಧಾನಿ ಮೋದಿಯವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ವಿಜಯಾನಂದ್ ಕಾಶಪ್ಪನವರ್ ಬೇರೆ ಜಾತಿಯವರಿಗೆ ಅಪಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ. ಅವರು ಗೋಕಾಕ್ ಮತ್ತು ಹುಕ್ಕೇರಿಯಲ್ಲಿ ಬಂದು, ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಹಾಗಾಗಿ ವಿಜಯಾನಂದ್​ ಕಾಶಪ್ಪನವರ್​ ಅವರನ್ನು ಸೋಲಿಸಬೇಕು ಎಂದು ಕರೆ ನೀಡಿದರು.

ಬಾಗಲಕೋಟೆಯಲ್ಲಿ ವಿಜಯ ಸಂಕಲ್ಪ ಯಾತ್ರೆ :ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಡೆದ ಬಿಜೆಪಿಯ ವಿಜಯ ಸಂಕಲ್ಪ ರಥಯಾತ್ರೆ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಕಳೆದ ಮಾರ್ಚ್ 13 ರಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಆರಂಭಗೊಂಡ ಬಿಜೆಪಿ ರಥಯಾತ್ರೆ ವಿವಿಧ ಕ್ಷೇತ್ರಗಳಲ್ಲಿ ಸಾಗಿದೆ. ರಥಯಾತ್ರೆಯ ಕೊನೆಯ ದಿನವಾದ ಇಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ವಿಧಾನಸಭಾ ಕ್ಷೇತ್ರ ಹಾಗೂ ಬಾದಾಮಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ರಥಯಾತ್ರೆ ನಡೆಯಿತು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಭೈರತಿ ಬಸವರಾಜ, ಮಾಜಿ ಸಚಿವ ರಮೇಶ ಜಾರಕಿಹೊಳಿ, ಸಚಿವ ಗೋವಿಂದ ಕಾರಜೋಳ ರಥಯಾತ್ರೆಯಲ್ಲಿ ಭಾಗಿಯಾಗಿದ್ದರು. ಹುನಗುಂದ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ರಥಯಾತ್ರೆ ಸಂದರ್ಭದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಹುನಗುಂದ ವಿಧಾನಸಭಾ ಕ್ಷೇತ್ರದ ಇಲಕಲ್ಲ ನಗರದ ಕಂಠೀ ವೃತ್ತದಲ್ಲಿ ಬಿಜೆಪಿ ರಥಯಾತ್ರೆ ಸಮಾವೇಶವಾಗಿ ಮಾರ್ಪಟ್ಟಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಭೈರತಿ ಬಸವರಾಜ್ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿ ಪಕ್ಷವನ್ನು ಬೆಂಬಲಿಸುವಂತೆ ಜನರಲ್ಲಿ ಮನವಿ ಮಾಡಿದರು. ರಮೇಶ್​ ಜಾರಕಿಹೊಳಿ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರು ಒಂದೇ ವೇದಿಕೆ ಮೇಲೆ ಕಂಡು ಬಂದರು. ಬಳಿಕ ಬಿಜೆಪಿ ರಥಯಾತ್ರೆ ಹುನಗುಂದದಿಂದ ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ ತೆರಳಿತು.

ಬನಶಂಕರಿ ತಾಯಿಯ ದರ್ಶನ ಪಡೆದ ಬಿಎಸ್​ವೈ :ಈ ವೇಳೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನಾಡಿನ ಶಕ್ತಿ ಪೀಠಗಳಲ್ಲಿ ಒಂದಾದ ಬಾದಾಮಿ ಬನಶಂಕರಿ ತಾಯಿಯ ದರ್ಶನ ಪಡೆದರು. ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಭೈರತಿ ಬಸವರಾಜ್ ಸೇರಿದಂತೆ ಹಲವು ಬಿಜೆಪಿ ನಾಯಕರು ಯಡಿಯೂರಪ್ಪಗೆ ಸಾತ್​ ನೀಡಿದರು.

ಇದನ್ನೂ ಓದಿ :ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುವೆ: ಸಚಿವ ಬಿ.ಶ್ರೀರಾಮುಲು

ABOUT THE AUTHOR

...view details