ಬಾಗಲಕೋಟೆ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸತತ ಮಳೆಯಾಗುತ್ತಿರುವ ಪರಿಣಾಮ ಐತಿಹಾಸಿಕ ಬಾದಾಮಿ ಅಕ್ಕ ತಂಗಿ ಜಲಪಾತ ಕಣ್ಮನ ಸೆಳೆಯುತ್ತಿದೆ. ಅಗಸ್ತ್ಯ ತೀರ್ಥ ಹೊಂಡ ಬಳಿ ಬೆಟ್ಟದ ಮೇಲಿಂದ ನೀರು ಧುಮ್ಮಿಕ್ಕುತ್ತಿರುವುದು ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಿದೆ.
ಬೆಟ್ಟದ ಪಕ್ಕದಲ್ಲಿಯೇ ಭೂತನಾಥ ದೇವಾಲಯವಿದ್ದು, ಪ್ರಕೃತಿಯ ಸೌಂದರ್ಯ ಮಧ್ಯೆ ಇರುವ ಬೆಟ್ಟದಿಂದ ನೀರು ಹರಿದು ಬರುವುದನ್ನ ಕಣ್ತುಂಬಿಕೊಳ್ಳಲು ಸ್ಥಳೀಯರ ದಂಡು ಆಗಮಿಸುತ್ತಿದೆ.