ಕರ್ನಾಟಕ

karnataka

ETV Bharat / state

ವೃತ್ತಿರಂಗಭೂಮಿ ಕಲಾವಿದರ ಬದುಕಿನೊಳಗೆ ಕೊರೊನಾ 'ಕಾರಸ್ತಾನ'.. ಸರ್ಕಾರ ಕಣ್ತೆರೆಯುವುದೇ? - ಬಾಗಲಕೋಟೆಯ ನಾಟಕ ಕಲಾವಿದರಿಗೆ ಕೊರೊನಾದಿಂದ ಸಮಸ್ಯೆ

ನಾಟಕ ಕಲಾವಿದರಿಗೆ 60 ವರ್ಷದವರಿಗೆ ಮಾಶಾಸನ ನೀಡುತ್ತಿದ್ದರು. ಆದರೆ, ಅದನ್ನು ಕಡಿಮೆ ಮಾಡಿ 45 ವರ್ಷಕ್ಕೆ ಮಾಶಾಸನ ಸಿಗುವಂತೆ ಮಾಡಬೇಕು..

dsdsd
ಕೊರೊನಾದಿಂದ ನಾಟಕ ಕಲಾವಿದರ ಬದುಕು ಅತಂತ್ರ

By

Published : Apr 11, 2021, 5:47 PM IST

Updated : Apr 11, 2021, 7:11 PM IST

ಬಾಗಲಕೋಟೆ :ಕೊರೊನಾ ಎರಡನೆ ಅಲೆಯಿಂದ ನಾಟಕ ಕಲಾವಿದರ ಜೀವನ ದುಸ್ತರವಾಗಿದೆ. ಕಳೆದ ವರ್ಷ ಕೊರೊನಾ ಲಾಕ್​ಡೌನ್​ದಿಂದ ಸಂಕಷ್ಟ ಎದುರಾಗಿತ್ತು. ಈಗ ಮತ್ತೆ ಅದೇ ಗೋಳು ಆರಂಭವಾಗಿದೆ.

ಕೊರೊನಾದಿಂದ ನಾಟಕ ಕಲಾವಿದರ ಬದುಕು ಅತಂತ್ರ

ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹಂಸನೂರು ಗ್ರಾಮದಲ್ಲಿ ಸುಮಾರು 150ಕ್ಕೂ ಅಧಿಕ ಮಹಿಳಾ ಕಲಾವಿದರಿದ್ದಾರೆ. ಇವರಿಗೆ ಜಾತ್ರೆ,ಉತ್ಸವ,ರಥೋತ್ಸವ ನಡೆಯುವ ಸಮಯದಲ್ಲಿ ಗ್ರಾಮದ ಯುವಕರು ನಡೆಸುವ ನಾಟಕದಲ್ಲಿ ಪಾತ್ರ ಮಾಡಿದರೆ ಮಾತ್ರ ಜೀವನದ ಬಂಡಿ‌ ನಡೆಯುವುದು.

ಆದರೆ, ಕೊರೊನಾದಿಂದ ಸರ್ಕಾರ ಮತ್ತೆ ಜಾತ್ರೆ,ಉತ್ಸವ ನಿಷೇಧ ಮಾಡಿದೆ. ಯುಗಾದಿ ಹಬ್ಬದ ದಿನದಂದು ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಜಾತ್ರೆಗಳು ನಡೆಯುತ್ತಿದ್ದವು. ಅಂತಹ ಸಮಯದಲ್ಲಿ ಗ್ರಾಮದ ಯುವಕ ಸಂಘಟನೆ ನಾಟಕ ಆಯೋಜಿಸಿ ಈ‌ ಮಹಿಳಾ ಕಲಾವಿದರ ಜೀವನಕ್ಕೆ ದಾರಿ ಮಾಡಿ‌ಕೂಡುತ್ತಿದ್ದರು.

ಈಗ ಮತ್ತೆ ಕೊರೊನಾ ಬರಸಿಡಿಲಿನಂತೆ ಎರಗಿದೆ. ಆದ್ದರಿಂದ ಸರ್ಕಾರ ಜಾತ್ರೆ, ಉತ್ಸವವನ್ನು ನಿಷೇಧಿಸಬಾರದು. ನಾಟಕಗಳು ನಡೆಸುವಂತೆ ಗ್ರಾಮೀಣ ಪ್ರದೇಶದಲ್ಲಿ ಅನುಮತಿ‌ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ನಾಟಕ ಕಲಾವಿದರಿಗೆ 60 ವರ್ಷದವರಿಗೆ ಮಾಶಾಸನ ನೀಡುತ್ತಿದ್ದರು. ಆದರೆ, ಅದನ್ನು ಕಡಿಮೆ ಮಾಡಿ 45 ವರ್ಷಕ್ಕೆ ಮಾಶಾಸನ ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Last Updated : Apr 11, 2021, 7:11 PM IST

ABOUT THE AUTHOR

...view details