ಕರ್ನಾಟಕ

karnataka

ETV Bharat / state

ಮಲಪ್ರಭಾ ನದಿ ಒತ್ತುವರಿ ಸರ್ವೆ ಕಾರ್ಯಕ್ಕೆ ತಯಾರಿ: ಸಚಿವ ಆರ್​​. ಅಶೋಕ್​​ - ಮಲಪ್ರಭಾ ನದಿ ಒತ್ತುವರಿ

ಬಾಗಲಕೋಟೆ ಜಿಲ್ಲಾ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಕಂದಾಯ ಸಚಿವ ಆರ್. ಅಶೋಕ್​​ ಮಲಪ್ರಭಾ ನದಿ ಒತ್ತುವರಿ ಕುರಿತು ಶೀಘ್ರವೇ ಸರ್ವೆ ಕಾರ್ಯ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Preparation for Malaprabha River Stress Survey said R Ashok
ಸಚಿವ ಆರ್​​ ಅಶೋಕ್​​

By

Published : Aug 25, 2020, 9:16 PM IST

ಬಾಗಲಕೋಟೆ: ಮಲಪ್ರಭಾ ನದಿಯ ಒತ್ತುವರಿ ತೆರೆವುಗೊಳಿಸುವುದಕ್ಕೆ ಶೀಘ್ರವಾಗಿ ಸರ್ವೆ ಕಾರ್ಯ ನಡೆಸಿ, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್​ ತಿಳಿಸಿದ್ದಾರೆ.

ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಮಲಪ್ರಭಾ ನದಿ ಒತ್ತುವರಿ ಆಗಿರುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಸಹ ನಡೆಸಲಾಗಿದೆ. ಈ ಬಗ್ಗೆ ಸಿಎಂ ಸಹ ಸ್ಪಂದನೆ ಮಾಡಿದ್ದಾರೆ. ಶೀಘ್ರವಾಗಿ ಸರ್ವೆ ಕಾರ್ಯ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಬಾಗಲಕೋಟೆ ಜಿಲ್ಲಾ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಕಂದಾಯ ಸಚಿವ ಆರ್. ಅಶೋಕ್​​

ನೆರೆ ಪರಿಹಾರಕ್ಕೆ ಕೇಂದ್ರದಿಂದ ಹಣ ಬಂದಿದೆ

ನೆರೆ ಪ್ರವಾಹದ ಹಾನಿಗೆ ಸಂಬಂಧಿಸಿದಂತೆ 527 ಕೋಟಿ ರೂ. ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಬಂದಿದೆ. ಅಲ್ಲದೆ ಎಲ್ಲಾ ಜಿಲ್ಲಾಧಿಕಾರಿ ನಿಧಿಯಲ್ಲಿ 947 ಕೋಟಿ ರೂ. ಹಣ ಇದೆ.

ಆದರೆ ವಿರೋಧ ಪಕ್ಷದವರು ವಿನಾಕಾರಣ ಹಣ ಇಲ್ಲ ಎಂದು ಆರೋಪ‌ ಮಾಡಿದ್ದಾರೆ. ಮಳೆ ಹಾನಿ ಸೇರಿದಂತೆ ಪ್ರಕೃತಿ ವಿಕೋಪ ಅಡಿ ಪರಿಹಾರ ನೀಡಲು ಸರ್ಕಾರದ ಹತ್ತಿರ ಹಣದ ತೊಂದರೆ ಇಲ್ಲ ಎಂದು ಇದೇ ಸಮಯದಲ್ಲಿ ತಿಳಿಸಿದರು.

ABOUT THE AUTHOR

...view details